ನಿಲ್ಲಿಸಿದ್ದಲ್ಲೇ ಏಕಾಏಕಿ ಸ್ಪೋಟಗೊಂಡ ಬೈಕ್: ವೀಡಿಯೋ ವೈರಲ್
ಹೈದರಾಬಾದ್: ನಿಲ್ಲಿಸಿದ್ದ ನೂತನ ಬೈಕ್‌ಗೆ ಬೆಂಕಿ ಹತ್ತಿ ಬಾಂಬ್ ರೂಪದಲ್ಲಿ ಬ್ಲಾಸ್ಟ್ ಆದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ.
ಮೈಸೂರಿನ ರವಿಚಂದ್ರ ಎಂಬಾತ ನೂತನ ಬೈಕ್ ಅನ್ನು ಖರೀದಿಸಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗುಂತಕಲ್ ಮಂಡಲದ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅದೇ ಬೈಕ್‌ನಲ್ಲಿ ಮೈಸೂರಿನಿಂದ ತೆರಳಿದ್ದರು.
ಅಲ್ಲಿ ದೇವಾಲಯದ ಹೊರಗೆ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ದೇವಸ್ಥಾನದ ಒಳಗೆ ಹೋಗಿದ್ದರು. ಈ ಸಂದರ್ಭ ಏಕಾಏಕಿ ಬೆಂಕಿ ಹತ್ತಿಕೊಂಡಿದೆ.
ಈ ಬೆಂಕಿಯು ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಹತ್ತಿದ ಪರಿಣಾಮ ಏಕಾಏಕಿ ಬ್ಲಾಸ್ಟ್ ಆಗಿದೆ. ಈ ವೇಳೆ ಭಯದಿಂದ ಸ್ಥಳೀಯರು ಓಡಿಹೋಗಿದ್ದಾರೆ. ನಂತರ ಹಲವರು ಬೈಕ್‌ಗೆ ನೀರು ಹಾಕಿ ಬೆಂಕಿಯನ್ನು ಆರಿಸಿದ್ದಾರೆ.
ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಸದ್ಯ ಈ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಇದೆ.





