March 21, 2026

ಕಾಸರಗೋಡು: ಬೈಕ್ ಹಾಗೂ ಟೆಂಪೋ ನಡುವೆ ಅಪಘಾತ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

0
accident.jpg

ಕಾಸರಗೋಡು: ಬೈಕ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತ ಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಚೆರ್ವತ್ತೂರಿನಲ್ಲಿ ಸೋಮವಾರ ನಡೆದಿದೆ.

ಬಂದ್ಯೋಡು ಪಚ್ಚಂಬಳದ ಕಾಮಿಲ್ ಮುಬಾಸಿರ್ (22) ಮೃತ ಪಟ್ಟವರು. ಸ್ನೇಹಿತ ಕಯ್ಯಾರಿನ ಅಬ್ದುಲ್ ರಹಮಾನ್ ಅಸ್ಪರಿ (24) ಗಂಭೀರ ಗಾಯಗೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಣ್ಣೂರು ಕಡೆಯಿಂದ ಕಾಸರಗೋಡಿಗೆ ಮೊಟ್ಟೆ ಹೇರಿಕೊಂಡು ಬರುತ್ತಿದ್ದಾಗ ಚೆರ್ವತ್ತೂರು ಪಡುವಳ ಎಂಬಲ್ಲಿ ಟೆಂಪೋ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ಅಪಘಾತದ ಬಳಿಕ ನಿಯಂತ್ರಣ ತಪ್ಪಿದ ಟೆಂಪೋ 100 ಮೀಟರ್ ನಷ್ಟು ಬೈಕ್ ನ್ನು ಎಳೆದುಕೊಂಡು ಹೋಗಿದ್ದು, ರಸ್ತೆಗೆ ಬಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು, ಪರಿಸರವಾಸಿಗಳು ಇಬ್ಬರನ್ನು ಚೆರ್ವತ್ತೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ಮುಬಾಸಿರ್ ಮೃತ ಪಟ್ಟರು. ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!