February 1, 2026

16 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕುಟುಂಬಗಳ ನಡುವೆ ಹೊಡೆದಾಟ ..!

0
image_editor_output_image822985882-1648966399944.jpg

ರಾಜಸ್ಥಾನ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 16 ವರ್ಷದ ಬಾಲಕಿಯೊಬ್ಬಳು ಮಲವಿಸರ್ಜನೆ ಮಾಡಲು ಹೋದಾಗ ಆಕೆಯ ನೆರೆ ಮನೆಯಾತ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ಆಕೆ ತನ್ನ ಮನೆಯವರಿಗೆ ತಿಳಿಸಿದಾಗ, ಅವರು ಅವನನ್ನು ವಿಚಾರಿಸಲು ಆರೋಪಿಯ ಮನೆಗೆ ಹೋಗಿದ್ದರು. ಆದಾಗ್ಯೂ, ಮಾತುಕತೆಗೆ ಬಾರದೆ ಅವನು ಮತ್ತು ಅವನ ಸಹಚರರು ಹುಡುಗಿ ಮತ್ತು ಅವಳ ಕುಟುಂಬವನ್ನು ಥಳಿಸಿದ್ದಾರೆ. ಈ ಹೊಡೆದಾಟದ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ನಂತರ ಬಾಲಕಿಯ ಮನೆಯವರು ಆರೋಪಿ ವಿರುದ್ಧ ಚಿಕ್ಕಸಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಲಕಿ, “ನಾನು ಸಂಜೆ ಕಾಡಿಗೆ ಹೋಗಿದ್ದೆ, ನನ್ನ ನೆರೆಹೊರೆಯವರು ನನಗೆ ಹಣ ನೀಡುವ ನೆಪದಲ್ಲಿ ನನ್ನನ್ನು ಕರೆದರು. ನಂತರ ಅವನು ನನ್ನನ್ನು ಹಿಡಿದು ಅತ್ಯಾಚಾರ ಮಾಡಿದ್ದಾನೆ ಮತ್ತು ಥಳಿಸಿದರು ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.

ಠಾಣಾಧಿಕಾರಿ ಗಂಗಾ ಸಹಾಯ್ ಮೀನಾ ಮಾತನಾಡಿ, ‘ಎರಡೂ ಕಡೆಯಿಂದ ದೂರು ದಾಖಲಾಗಿದೆ. ಒಬ್ಬರು ಭೂಮಿ ವಿಚಾರಕ್ಕೆ ಹೋರಾಟ, ಜಗಳ ನಡೆದಿದೆ ಎಂದು ಹೇಳಿದರೆ, ಇನ್ನೊಂದು ಕುಟುಂಬ ಆ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ನಡೆದಿರುವುದಾಗಿ ಆರೋಪಿಸಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ” ಎಂದರು.

Leave a Reply

Your email address will not be published. Required fields are marked *

error: Content is protected !!