March 19, 2026

ಆನ್ಲೈನ್ ಹೂಡಿಕೆ: ಬರೋಬ್ಬರಿ 4.4 ಕೋಟಿ ರೂ. ಕಳೆದುಕೊಂಡ ನಟಿ

0
Screenshot_2022-04-01-18-31-10-26_680d03679600f7af0b4c700c6b270fe7.jpg

ಮುಂಬೈ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಮೋಸಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಖ್ಯಾತ ನಟಿ ರಿಮಿ ಸೇನ್ ಬರೋಬ್ಬರಿ 4.4 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ನಟಿಗೆ ರೋಣಕ್​ ಜಟಿನ್​ ಎಂಬಾತ ಪರಿಚಯ ಆಗಿದ್ದು, ಆತ ಎಲ್​ಇಡಿ ಬಲ್ಬ್​ಗಳ ವ್ಯವಹಾರ ಮಾಡುವುದಾಗಿ ನಟಿಗೆ ಹೇಳಿಕೊಂಡಿದ್ದ. ಅಲ್ಲದೆ ಆ ಉದ್ಯಮದ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಶೇ.40 ಲಾಭ ತೆಗೆದುಕೊಡುವುದಾಗಿ ನಟಿಗೆ ಹೇಳಿದ್ದಾರೆ.

ಇನ್ನು ಶೇ .40 ಲಾಭ ಎಂದ ತಕ್ಷಣ ನಟಿ ರಿಮಿ ಅವರು ಕಣ್ಮುಚ್ಚಿಕೊಂಡು 4.4 ಕೋಟಿ ರೂಪಾಯಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಆ ಬಳಿಕ ಆತ ನಾಪತ್ತೆ ಆಗಿದ್ದಾನೆ.

2019 ರಲ್ಲಿ ಜಿಮ್​ನಲ್ಲಿ ರೋಣಕ್ ನನಗೆ ಪರಿಚಯ ಆಗಿದ್ದು, ನಂತರ ನಾವಿಬ್ಬರೂ ಗೆಳೆಯರಾದೆವು. 4.4 ಕೋಟಿ ರೂಪಾಯಿ ಹಣವನ್ನು ನನ್ನಿಂದ ತೆಗೆದುಕೊಂಡು ಲಾಭದ ಜತೆಗೆ ಹಣ ಹಿಂದಿರುಗಿಸಲು ಒಂದು ಗಡುವು ನೀಡಿದ್ದ. ಆದರೆ ಈಗ ಹಣವೂ ಇಲ್ಲ, ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ನಟಿ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬುಧವಾರದಂದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!