March 19, 2026

ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ: ಮೂವರು ಕೂದಲೆಳೆ ಅಂತರದಲ್ಲಿ ಪಾರು

0
image_editor_output_image-1355165457-1648816694635.jpg

ಚೆನ್ನೈ: ಮನೆಯ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುವ ವೇಳೆ ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ವರದಿ ತಿಳಿಸಿದೆ.

ಕಲ್ಲಕುರುಚಿ ಜಿಲ್ಲೆಯ ಕಲ್ವರಾಯನ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿರುವ ಬುಡಕಟ್ಟು ನಿವಾಸಿಯ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮನೆ ಮಾಲೀಕ ರಾಜಾ, ಆತನ ಪತ್ನಿ ಹಾಗೂ ಹತ್ತು ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.

ವರದಿಗಳ ಪ್ರಕಾರ, ಕಳೆದ ರಾತ್ರಿ ರಾಜಾ ಪತ್ನಿ ಗ್ಯಾಸ್ ಒಲೆ ಮೇಲೆ ಹಾಲನ್ನು ಇಟ್ಟು ಕುದಿಸುತ್ತಿದ್ದರು. ನಂತರ ಆಕೆ ಪಕ್ಷದ ಮನೆಗೆ ತೆರಳಿದ್ದಳು. ಆದರೆ ಆಕೆ ಗ್ಯಾಸ್ ಒಲೆ ಮೇಲೆ ಹಾಲು ಕುದಿಯುತ್ತಿರುವುದು ಮರೆತು ಬಿಟ್ಟಿದ್ದಳು. ಅದರ ಪರಿಣಾಮ ಹುಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು.

ಕೂಡಲೇ ಅಪಾಯ ಅರಿತ ರಾಜಾ, ಮಗು, ಪತ್ನಿ ಹಾಗೂ ನೆರೆಹೊರೆಯವರು ಮನೆ ಬಿಟ್ಟು ದೂರ ಹೋಗಿದ್ದು, ಅಷ್ಟರಲ್ಲಿ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಮನೆ ಸುಟ್ಟು ಭಸ್ಮವಾಗಿ ಹೋಗಿರುವುದಾಗಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!