ಸುಳ್ಯ:ನಡೆದುಕೊಂಡು ಹೊರಗುತ್ತಿದ್ದಾಗ ಕುಸಿದು ಬಿದ್ದುಮಹಿಳೆ ಮೃತ್ಯು: ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಂ ಮಹಿಳೆ ಝುಬೈದ
ಸುಳ್ಯ: ಜಟ್ಟಿಪಳ್ಳ ಕಟ್ಟೆ ಬಳಿ ನಿವಾಸಿ ಪದ್ಮಾವತಿ (55) ಎಂಬವರು ಮನೆಯಿಂದ ಸುಳ್ಯಕ್ಕೆ ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಜಟ್ಟಿಪಳ್ಳ ಅಂಗನವಾಡಿ ಬಳಿ ರಸ್ತೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ಕುಸಿದು ಬಿದ್ದವರನ್ನು ಸ್ಥಳೀಯರು ಸೇರಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ಕೊಂಡೊಯ್ದರಾದರೂ ಆ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಮೃತಶರೀರವನ್ನು ಸ್ಥಳೀಯರು ಜಟ್ಟಿಪಳ್ಳ ಪದ್ಮಾವತಿ ಅವರ ಮನೆಗೆ ಕೊಂಡೊಯ್ದಿದ್ದಾರೆ.

ಮೃತ ಹಿಂದೂ ಮಹಿಳೆಯ ಶರೀರವನ್ನು ಆಂಬುಲೆನ್ಸ್ ಮೂಲಕ ಮನೆಗೆ ಕೊಂಡೊಯ್ಯಲು ಸಾಥ್ ನೀಡಿದ ಮುಸ್ಲಿಂ ಮಹಿಳೆ
ಪದ್ಮಾವತಿ ರವರ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ಕೊಂಡೊಯ್ಯುವಾಗ ನೆರೆಮನೆಯ ಮುಸ್ಲಿಂ ಮಹಿಳೆ ಜುಬೈದ ಎಂಬುವವರು ಸಂಪೂರ್ಣವಾಗಿ ಭಾಗಿಯಾಗಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಝುಬೈದಾ ರವರು ಮೃತ ಮಹಿಳೆಯ ನೆರೆಮನೆಯ ವರಾಗಿದ್ದು ಪದ್ಮಾವತಿರವರು ರಸ್ತೆಯಲ್ಲಿ ಕುಸಿದು ಬಿದ್ದ ಕಾರಣ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ತಮ್ಮ ಮಗನ ಆಟೋದಲ್ಲಿ ಆಸ್ಪತ್ರೆಗೆ ತೆರಳಿದ ಝುಬೈದಾ ರವರಿಗೆ ಪದ್ಮಾವತಿರವರು ಮೃತ ರಾಗಿರುವ ವಿಷಯ ತಿಳಿದಿದೆ. ಈ ವೇಳೆ ಸ್ಥಳೀಯರು ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಇರಿಸುವ ಸಂದರ್ಭ ಝುಬೈದಾ ರವರು ತಾನೇ ಮುಂದಾಗಿ ಆಂಬುಲೆನ್ಸ್ ನಲ್ಲಿ ಕುಳಿತು ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಸಹಕಾರಿಯಾಗಿ ಮನೆಗೆ ತಲುಪಿದ ನಂತರ ಅಲ್ಲಿಯೂ ಕೂಡ ಮೃತದೇಹವನ್ನು ಸ್ಥಳೀಯರು ಮನೆಯೊಳಗೆ ಕೊಂಡೊಯ್ಯುವ ಸಂದರ್ಭ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡರು.
ಪ್ರಸ್ತುತ ಸಂದರ್ಭದಲ್ಲಿ ಇಡೀ ಕರ್ನಾಟಕ ಹಿಜಾಬ್ ವಿವಾದ, ಹಲಾಲ್ ವಿವಾದ, ಮುಸಲ್ಮಾನರಿಗೆ ಜಾತ್ರೋತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ನಿರ್ಬಂಧ ಮುಂತಾದ ಕೋಮು ವಿಷಯಗಳಿಗೆ ಸಂಬಂಧಿಸಿದಂತೆ ವಿವಾದಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನೆರೆಮನೆಯ ಹಿಂದೂ ಮಹಿಳೆಯೋರ್ವರ ಮೃತ ಶರೀರವನ್ನು ಮನೆಗೆ ಕೊಂಡೊಯ್ಯಲು ಸಂಪೂರ್ಣ ಭಾಗಿಯಾಗಿ, ತನ್ನ ದುಃಖವನ್ನು ಮನಸ್ಸಿನಲ್ಲಿಡಲು ಸಾಧ್ಯವಾಗದೆ ತನ್ನ ಸ್ನೇಹಿತೆಯ ಅಗಲುವಿಕೆಯನ್ನು ನೆನೆದು ದುಃಖಿಸುತ್ತಿದ್ದ ಝುಬೈದರವರ ಸೌಹಾರ್ದತೆಯ ಭಾವ ಸ್ಥಳೀಯ ಜನರಲ್ಲಿ ಪ್ರಶಂಸೆಗೆ ಕಾರಣವಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ತೀರ್ಥ ಪ್ರಸಾದ್ ಕಾನತ್ತಿಲ ಎಂಬುವವರು ತಮ್ಮ ಆಟೋದಲ್ಲಿ ಸ್ಥಳೀಯರ ಸಹಕಾರ ಪಡೆದು ಪದ್ಮಾವತಿ ರವನ್ನು ಆಸ್ಪತ್ರೆಗೆ ತಲುಪಿಸಿದರು.
ಅಡ್ವಕೇಟ್ ನಾರಾಯಣ ಜಟ್ಟಿಪಳ್ಳ, ಪ್ರಸಾದ್ ಕಾನತ್ತಿಲ್ಲ, ನಾರಾಯಣ ಕುರುಂಜಿಭಾಗ್, ರಮೇಶ್ ಜಟ್ಟಿಪಳ್ಳ, ಮಾಧವ ಜಟ್ಟಿಪಳ್ಳ, ಶರೀಫ್ ಸುದ್ದಿ, ಶಿಹಾಬ್, ಕಿರಣ್ ಜಟ್ಟಿಪಳ್ಳ ಮೊದಲಾದವರು ಆಸ್ಪತ್ರೆಯ ಬಳಿ ತೆರಳಿ ಮಹಿಳೆಯ ಆರೋಗ್ಯ ವಿಚಾರಿಸಲು ತೆರಳಿದಾಗ ಅವರು ಮೃತರಾದ ವಿಷಯ ತಿಳಿದು
ನಂತರ ಎಲ್ಲರೂ ಸೇರಿ ಮೃತರ ಮನೆಗೆ ಮೃತ ಶರೀರವನ್ನು ತರಲು ಸಹಕರಿಸಿದರು ಎಂದು ತಿಳಿದುಬಂದಿದೆ.




