March 21, 2026

ಉಡುಪಿ: ಹಲಾಲ್ ಹೊಟೇಲ್ ಬಹಿಷ್ಕಾರಕ್ಕೆ ಬಿಜೆಪಿ ಮುಖಂಡರ ಕರೆ

0
images.png

ಉಡುಪಿ: ಹಲಾಲ್ ಬೋರ್ಡ್ ತೂಗು ಹಾಕಿ ವ್ಯಾಪಾರ ನಡೆಸುವ ಹಿಂದೂ ಹೊಟೇಲ್ ಗಳನ್ನು ಬಹಿಷ್ಕರಿಸಬೇಕು ಎಂಬುದಾಗಿ ಉಡುಪಿ ಜಿಲ್ಲಾ ಬಿಜೆಪಿ ಮುಖಂಡರು ಕರೆ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಪೋಸ್ಟರ್ ಗಳು ವೈರಲ್ ಆಗುತ್ತಿದೆ.

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಅವರು ಈ ಕುರಿತ ಪೋಸ್ಟರ್ ನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು, ಹಲಾಲ್ ಬೋರ್ಡ್ ನೇತು ಹಾಕಿರುವ ಹಿಂದೂ ಹೊಟೇಲುಗಳಲ್ಲಿ ನಮಗೆ ವ್ಯಾಪಾರ ಬೇಡ, ಅಂತಹ ಹೊಟೇಲ್ ಗಳನ್ನು ಬಹಿಷ್ಕರಿಸೋಣ ಎಂಬುದಾಗಿ ಪೋಸ್ಟರ್ ನಲ್ಲಿ ಬರೆಯಲಾಗಿದೆ.

ಇನ್ನೋರ್ವ ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ, ಹಲಾಲ್ ಮುದ್ರೆಯಿರುವ ಮಾಂಸಗಳನ್ನು ಹಿಂದೂಗಳು ತಿನ್ನಬಾರದು ಎಂದಿದ್ದಾರೆ. ಹಲಾಲ್ ಎಂಬುವುದೊಂದು ಇತರ ಸಮುದಾಯದವರಿಂದ ಉದ್ಯೋಗ ಕಿತ್ತುಕೊಳ್ಳುವ ಪಿತೂರಿಯಾಗಿದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಹಲಾಲ್ ಬೋರ್ಡ್ ಇರುವ ಹಿಂದೂ ಹೊಟೇಲ್ ಗಳಲ್ಲಿ ಆಹಾರ ಸೇವನೆ ನಿಷೇಧಿಸಬೇಕು ಎಂದವರು ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!