ಕೊಳ್ನಾಡು: ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ: ಕೊಳ್ನಾಡು ಗ್ರಾಮದ ನರ್ಕಳ ಬಸ್ತಿಮೂಲೆ ಪಾದೆಕರಿಯ ರಸ್ತೆ ಕಾಂಕ್ರೀಟೀಕರಣಕ್ಕೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ವಿಶೇಷ ಅನುದಾನದಲ್ಲಿ ಮಂಜೂರಾದ 25 ಲಕ್ಷ ರೂಪಾಯಿಯ ಕಾಮಗಾರಿಯ ಶಿಲಾನ್ಯಾಸವನ್ನು
ಕೊಳ್ನಾಡು ಗ್ರಾಮ ಪಂಚಾಯತ್ ಸದಾಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ ಇವರು ನೆರವೇರಿಸಿದರು.




ಈ ಸಮಯ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಜಯರಾಮ ನಾಯ್ಕ ಕುಂಟ್ರಕಲ, ಕೊಳ್ನಾಡು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಅಗರಿ, ಲೋಹಿತ್ ಅಗರಿ, ಹರೀಶ್ ಟೈಲರ್ ಮಂಕುಡೆ, ಶಶಿಕಲಾ ಹರೀಶ್ ಶೆಟ್ಟಿ ಕುದ್ರಿಯ, ಕೃಷ್ಣಪ್ಪ ಪೂಜಾರಿ ಕುಡ್ತಮುಗೇರು, ಕೊಳ್ನಾಡು ಬಿಜೆಪಿ ಪ್ರಮುಖರಾದ ಮಹಾಲಿಂಗ ಭಟ್ ಬಸ್ತಿಮೂಲೆ, ಹರೀಶ್ ಶೆಟ್ಟಿ ಕುದ್ರಿಯ, ಹಿರಿಯರಾದ ಶಾಂತ M ಭಟ್ ಬಸ್ತಿಮೂಲೆ, ಶಂಕರ್ ಭಟ್ ಕಲ್ಲಾಜೆ, ಸದಾಶಿವ ಶೆಟ್ಟಿ ಕೆದುಮೂಲೆ, ಗುರುವಪ್ಪ ಪೂಜಾರಿ ಪಾದೆಕರಿಯ, ಅಪ್ಪು ನಾಯ್ಕ ಪಾದೆಕರಿಯ, ಲಕ್ಷ್ಮಣ ಗೌಡ ಪಾದೆಕರಿಯ ಮುಂತಾದವರು ಉಪಸ್ಥಿತರಿದ್ದರು.





