ವಿಟ್ಲ: ರಸ್ತೆ ಕಾಮಗಾರಿ ಯಡವಟ್ಟು: ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ: ಇಬ್ಬರಿಗೆ ಗಾಯ
ವಿಟ್ಲ: ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ರಾಧುಕಟ್ಟೆ ಎಂಬಲ್ಲಿ ಎಂಬಲ್ಲಿ ನಡೆದಿದೆ.

ಕಾರಿನಲ್ಲಿದ್ದ ಕಂಬಳಬೆಟ್ಟು ನಿವಾಸಿಗಳಾದ ಶಮೀರ್ ಮತ್ತು ಶಾಹಿದ ಎಂಬವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮಂಗಳೂ ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.
ರಾಧುಕಟ್ಟೆ ಎಂಬಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಸಾಮಾಗ್ರಿಗಳನ್ನು ಎಲ್ಲೆಲ್ಲ ಇಟ್ಟಿದ್ದರು. ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು ಎಂದು ಸ್ಥಳೀಯರು ಈ ಹಿಂದೆ ದೂರಿದ್ದರು.





