March 23, 2026

ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದ ವಿಲ್ ಸ್ಮಿತ್

0
Screenshot_2022-03-28-11-51-02-20_680d03679600f7af0b4c700c6b270fe7.jpg

ಯುನೈಟೆಡ್ ಸ್ಟೇಟ್ಸ್: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೋದರಿಯರಾದ ವೀನಸ್ ವಿಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ತಂದೆ ರಿಚರ್ಡ್ ವಿಲಿಯಮ್ಸ್ ಅವರ ಜೀವನ ಚರಿತ್ರೆಯನ್ನಾಧರಿಸಿದ ಚಿತ್ರ ‘ಕಿಂಗ್ ರಿಚರ್ಡ್’ ಪಾತ್ರದ ಅಭಿನಯಕ್ಕಾಗಿ ವಿಲ್ ಸ್ಮಿತ್ ಈ ಬಾರಿಯ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. 

ವಿಲ್ ಸ್ಮಿತ್ ಅವರು ತಮ್ಮ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬಗ್ಗೆ ಹಾಸ್ಯ ಮಾಡಿದ ನಿರೂಪಕ ಕ್ರಿಸ್ ರಾಕ್ ಗೆ ಕಪಾಳಮೋಕ್ಷ ಮಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಇದಾದ ಬಳಿಕ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ ಕೂಡಲೇ ವೇದಿಕೆಯಲ್ಲಿ ಮಾತನಾಡುತ್ತಾ ಕಲೆ ಜೀವನವನ್ನು ಅನುಕರಿಸುತ್ತದೆ. ನಾನು ರಿಚರ್ಡ್ ವಿಲಿಯಮ್ಸ್ ನಂತೆ ಕ್ರೇಜಿ ತಂದೆಯಾಗಿದ್ದೇನೆ, ಆಸ್ಕರ್ ಅಕಾಡೆಮಿ ನನ್ನನ್ನು ವಾಪಾಸ್ ಕರೆಸಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದರು.

ವಿಲ್ ಸ್ಮಿತ್ ಜೇವಿಯರ್ ಬಾರ್ಡೆಮ್ (“ಬೀಯಿಂಗ್ ದಿ ರಿಕಾರ್ಡೋಸ್”), ಬೆನೆಡಿಕ್ಟ್ ಕಂಬರ್‌ಬ್ಯಾಚ್ (“ದ ಪವರ್ ಆಫ್ ದಿ ಡಾಗ್”), ಆಂಡ್ರ್ಯೂ ಗಾರ್ಫೀಲ್ಡ್ (“ಟಿಕ್, ಟಿಕ್…ಬೂಮ್!”) ಮತ್ತು ಡೆನ್ಜೆಲ್ ವಾಷಿಂಗ್ಟನ್ (“ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್”) ಅವರನ್ನು ಆಸ್ಕರ್ ರೇಸ್ ನಲ್ಲಿ ಹಿಂದಿಕ್ಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!