August 21, 2026

ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಮೃತ್ಯು

0
Screenshot_2022-03-28-10-51-43-67_680d03679600f7af0b4c700c6b270fe7.jpg

ಬೆಂಗಳೂರು: ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ 13 ವರ್ಷದ ಬಾಲಕನೊಬ್ಬ ನಗರದ ಹೊರವಲಯದಲ್ಲಿರುವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. 

ಮೃತ ಬಾಲಕನನ್ನು ಸಂತೋಷ್ (13) ಎಂದು ಗುರ್ತಿಸಲಾಗಿದ್ದು, ವಿದ್ಯಾನಗರದ ನಿವಾಸಿಯಾಗಿದ್ದು, ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. 

ಸಂತೋಷ್ ಶನಿವಾರ ಶಾಲೆಗೆ ಹೋಗಿದ್ದು ತರಗತಿ ಮುಗಿಸಿ ಸ್ನೇಹಿತರ ಗುಂಪಿನೊಂದಿಗೆ ಸರ್ಜಾಪುರದ ದೊಡ್ಡಕೆರೆ ಕೆರೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಕೆರೆ ಧುಮುಕಿದ ಸಂತೋಷ್ ನಾಪತ್ತೆಯಾಗಿರುವುದನ್ನು ಅರಿತ ಸ್ನೇಹಿತರು ನೀರಿಗೆ ಧುಮುಕಿ ಕೆಲ ಕಾಲ ಈಜಿ ಹುಡುಕಾಟ ನಡೆಸಿದ್ದಾರೆ. ಬಳಿಕ ಸಂತೋಷ್ ಸಿಗದಿದ್ದಾಗ ಆತಂಕಗೊಂಡು ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

Leave a Reply

Your email address will not be published. Required fields are marked *

You may have missed

error: Content is protected !!