August 21, 2026

ಕಾಸರಗೋಡು: ರಾಷ್ಟ್ರೀಯ ಮುಷ್ಕರಕ್ಕೆ ಬಸ್ ಸಂಚಾರ ಸ್ಥಗಿತ

0
image_editor_output_image635457888-1648445325478.jpg

ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆ ಗಳು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರ ಕಾಸರಗೋಡಿನಲ್ಲಿ ಭಾಗಶಃ ಪ್ರತಿಕ್ರಿಯೆ ಕಂಡು ಬಂದಿದೆ.

ಬಸ್ಸು ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ ಕೆ ಎಸ್ ಆರ್ ಟಿ ಸಿ , ಖಾಸಗಿ ಬಸ್ಸು ಗಳು ರಸ್ತೆ ಗಿಳಿದಿಲ್ಲ. ಆಟೋ ಟ್ಯಾಕ್ಸಿ ಗಳು ಬಹುತೇಕ ಮುಷ್ಕರದಲ್ಲಿ ಪಾಲ್ಗೊಂಡಿವೆ. ಖಾಸಗಿ ವಾಹನ ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.

ಇನ್ನು ನಗರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮುಷ್ಕರದ ಬಿಸಿ ತಟ್ಟಿಲ್ಲ. ಅಂಗಡಿ ಮುಂಗಟ್ಟುಗಳು ತೆರೆದಿದ್ದು ಬಸ್ಸುಗಳು ಹೊರತುಪಡಿಸಿ ಉಳಿದ ವಾಹನಗಳು ಸಂಚಾರ ನಡೆಸುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!