December 15, 2025

“ಪುರುಷೋತ್ತಮನ ಪ್ರಸಂಗ” ಚಿತ್ರೀಕರಣ ತಂಡ ದುಬೈಯಿಂದ ತಾಯ್ನಾಡಿಗೆ

0
IMG-20220325-WA0049

ಬೆಂಗಳೂರು ರಾಷ್ಟ್ರಕೂಟ ಪಿಚರ್ಸ್ ಲಾಂಛನದಡಿಯಲ್ಲಿ ವಿ.ರವಿಕುಮಾರ್ ನಿರ್ಮಾಣದ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶಿಸುತ್ತಿರುವ ಕನ್ನಡ ಚಲನಚಿತ್ರ “ಪುರುಷೋತ್ತಮನ ಪ್ರಸಂಗ” ಚಿತ್ರತಂಡ ಮಾರ್ಚ್ 18 ರಂದು ಯುಎಇಗೆ ಚಿತ್ರೀಕರಣಕ್ಕಾಗಿ ತೆರಳಿದ್ದು, ಚಿತ್ರೀಕರಣ ಮುಗಿಸಿ ಶುಕ್ರವಾರ (25/03) ಮರಳಿ ಮಂಗಳೂರಿಗೆ ಪ್ರಯಾಣ ಬೆಳೆಸಿದೆ.

ರಾಷ್ಟ್ರಕೂಟ ಪಿಚರ್ಸ್ ನ ವಿ.ರವಿಕುಮಾರ್ ನಿರ್ಮಾಪಕರಾಗಿ, ಮಂಗಳೂರಿನ ‘ತೆಲಿಕೆದ ಬೊಳ್ಳಿ’ ಖ್ಯಾತಿಯ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಬಹುತೇಕ ಚಿತ್ರೀಕರಣವು ತಾಯ್ನಾಡಿನಲ್ಲಿ ಚಿತ್ರೀಕರಣಗೊಂಡಿದ್ದು, ಕೆಲವು ಮಹತ್ವದ ಶೂಟಿಂಗನ್ನು ಯುಎಇಯಲ್ಲಿ ದಾಖಲಿಸಬೇಕಾಗಿತ್ತು. ಹಾಸ್ಯ ಮತ್ತು ಚಿಂತನೆಗೆ ಹಚ್ಚುವ ಪುರುಷೋತ್ತಮನ ಪ್ರಸಂಗದ ಕಥೆ, ಚಿತ್ರಕಥೆ ವಿಭಿನ್ನವಾಗಿದೆ. ದುಬೈ ತಂಡದಲ್ಲಿ ನಿರ್ದೇಶಕ ದೇವದಾಸ್ ಕಾಪಿಕಾಡ್, ಚಿತ್ರನಟ ಅಜಯ್ ಪೃಥ್ವಿ, ನಟ ಸಾಯಿಕೃಷ್ಣ ಕುಡ್ಲ, ಸಹನಿರ್ದೇಶಕ ಅರ್ಜುನ್ ಕಾಪಿಕಾಡ್, ಸಹಾಯಕ ನಿರ್ದೇಶಕರಾದ ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಅರ್ಜುನ್ ಕಜೆ, ಕ್ಯಾಮೆರಾಮೇನ್ ವಿಷ್ಣುಪ್ರಸಾದ್, ಪ್ರೊಡಕ್ಷನ್ ಮೆನೇಜರ್ ಸಂದೀಪ್ ಶೆಟ್ಟಿ, ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್ ಅಬೂಬಕರ್ ಪುತ್ತು ಉಪ್ಪಿನಂಗಡಿ ಮತ್ತು ರಶೀದ್ ವಿಟ್ಲ ತಂಡದಲ್ಲಿದ್ದರು.

ದುಬೈ ಚಿತ್ರೀಕರಣದಲ್ಲಿ ರೊನಾಲ್ಡ್ ಮಾರ್ಟಿಸ್, ನವೀದ್ ಮಾಗುಂಡಿ, ಸಲೀಮ್ ನಟನೆ ಮಾಡಿದ್ದರು. ಪ್ರೀತಿ ಮೇಕಪ್ ಸಹಕಾರ ನೀಡಿದರು. ದಯಾ ಕಿರೋಡಿಯನ್, ಪ್ರದೀಪ್ ಕಿರೋಡಿಯನ್, ಯಶ್, ಮುಸ್ತಾಕ್ ದುಬೈ, ಅನಿಲ್ ಕಾಮತ್, ರಾಜೇಶ್, ರವಿ ಉಲ್ಲೋಡಿ ಮೊದಲದವರು ಚಿತ್ರೀಕರಣಕ್ಕೆ ದುಬೈಯಲ್ಲಿ ಸಹಕಾರ ನೀಡಿದ್ದಾರೆ. ದುಬೈಯ ದೇರಾ, ಲೇಬರ್ ಕ್ಯಾಂಪ್, ಶೇಖ್ ಝಾಯೆದ್ ರಸ್ತೆ, ದುಬೈ ವಿಮಾನ ನಿಲ್ದಾಣ ಟರ್ಮಿನಲ್ 2, ಅಬುದಾಬಿಯ ಮುಸ್ಸಪ್ಫ ಮೊದಲಾದೆಡೆ ಚಿತ್ರೀಕರಣಗೊಂಡಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಚಿತ್ರನಟಿ ರಿಷಿಕಾ ನಾಯ್ಕ್, ದೀಪಿಕಾ, ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಶೋಭರಾಜ್, ದೀಪಕ್ ರೈ ಪಾಣಾಜೆ, ಚೇತನ್ ರೈ, ಜ್ಯೋತಿಷ್ ಶೆಟ್ಟಿ ಮೊದಲಾದವರಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!