ಪ್ರಿಯಕರನ ಮದುವೆ ದಿನವೇ ನೇಣಿಗೆ ಶರಣಾದ ಪ್ರಿಯತಮೆ
ಶಿವಮೊಗ್ಗ : ಬೇರೆ ಯುವತಿ ಜೊತೆಗೆ ಪ್ರಿಯಕರ ಮದುವೆ ಆಗುತ್ತಿರುವುದರಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಮದುವೆ ಮಂಟಪದಿಂದಲೇ ಪರಾರಿಯಾಗಿದ್ದಾನೆ.
ಶಿವಮೊಗ್ಗದ ಓ.ಟಿ.ರಸ್ತೆಯ ರೂಪಶ್ರೀ, ಮನೆಯಲ್ಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದು, ಪ್ರಿಯಕರನ ವಿರುದ್ಧ ಆರೋಪ ಮಾಡಿದ್ದಾಳೆ.
ಮುರಳಿ ಎಂಬಾತನನ್ನು ರೂಪಶ್ರೀ ಬಹು ವರ್ಷದಿಂದ ಪ್ರೀತಿಸುತ್ತಿದ್ದಳು. ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮುರಳಿಯ ಮದುವೆ ನಿಶ್ಚಯವಾಗಿತ್ತು. ಮದುವೆ ದಿನವೇ ರೂಪಶ್ರೀ ನೇಣಿಗೆ ಶರಣಾಗಿದ್ದಾರೆ.




