August 13, 2026

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಮ್ಮ ವಿರೋಧವಿಲ್ಲ: ಶಾಸಕ ಯು.ಟಿ. ಖಾದರ್‌

0
Screenshot_2022-03-21-10-44-50-15_680d03679600f7af0b4c700c6b270fe7.jpg

ಬಳ್ಳಾರಿ: ‘ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಎಲ್ಲ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಸೇರಿಸಿ ಮಕ್ಕಳಿಗೆ ಮೌಲಿಕ ಶಿಕ್ಷಣ ಕೊಡಲಿ’ ಎಂದು ಕಾಂಗ್ರೆಸ್‌ ನಾಯಕ, ಶಾಸಕ ಯು.ಟಿ. ಖಾದರ್‌ ಸಲಹೆ ಮಾಡಿದರು.

ಬಳ್ಳಾರಿ ಮೇಯರ್‌ ಉಪ ಮೇಯರ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ವೀಕ್ಷಕರಾಗಿ ಬಂದಿದ್ದ ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪಠ್ಯದಲ್ಲಿ ಭಗವದ್ಗೀತೆ ಅಷ್ಟೇ ಅಲ್ಲ, ವಚನ ಸಾಹಿತ್ಯ, ನಾರಾಯಣಗುರು ಅವರ ಚಿಂತನೆ, ಕೋಟಿ ಚನ್ನಯ್ಯನವರ ವಿಚಾರ ಸೇರಿದಂತೆ ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಸೇರಿಸಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸಲಿ’ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!