ಲಂಡನ್‌ನಲ್ಲಿ ಭಾರತೀಯ ಮೂಲದ ಯುವತಿಯ ಹತ್ಯೆ: ಟ್ಯುನಿಷಿಯಾ ಪ್ರಜೆಯ ಬಂಧನ
ಲಂಡನ್: ಲಂಡನ್‌ನಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ಭಾರತೀಯ ಮೂಲದ ಬ್ರಿಟನ್ ಪ್ರಜೆಯಾಗಿರುವ ಯುವತಿಯನ್ನು ಹಲ್ಲೆ ನಡೆಸಿ ಹತ್ಯೆಗೈದ ಆರೋಪದ ಮೇಲೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ತಂಡವು ಟ್ಯುನಿಷಿಯಾ ಪ್ರಜೆಯನ್ನು ಬಂಧಿಸಿದೆ.
ಮೃತ ಮಹಿಳೆಯನ್ನು 19 ವರ್ಷದ ಬ್ರಿಟನ್ ಪ್ರಜೆಯಾಗಿರುವ ಸಬಿತಾ ಥನ್ವಾನಿ ಎಂದು ಗುರುತಿಸಲಾಗಿದ್ದು, ಶನಿವಾರ ಲಂಡನ್‌ನ ಕ್ಲರ್ಕೆನ್‌ವೆಲ್ ಪ್ರದೇಶದ ಅರ್ಬರ್ ಹೌಸ್ ವಿದ್ಯಾರ್ಥಿಗಳು ವಾಸವಿದ್ದ ಫ್ಲಾಟ್‌ನಲ್ಲಿ, ಕುತ್ತಿಗೆಗೆ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದರು.




