February 4, 2026

ಕೇರಳದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿತ: 60 ಮಂದಿ ಗಾಯ- ಹಲವರ ಸ್ಥಿತಿ ಗಂಭೀರ

0
image_editor_output_image-435311821-1647740626523

ಕೋಝಿಕೋಡ್: ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿದು ಬಿದ್ದು 60 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿರುವ ಘಟನೆ ಮಲಪ್ಪುರಂ ಸಮೀಪದ ವಂಡೂರಿನ ಪೂಂಗೊಡೆಯಲ್ಲಿ ನಡೆದಿದೆ.

ಗಾಯಾಳುಗಳನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ವಂಡೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿದಿದೆ.

ಘಟನೆ ನಡೆದ ಸಂದರ್ಭದಲ್ಲಿ ಸುಮಾರು 3 ಸಾವಿರ ಮಂದಿ ಪಂದ್ಯ ವೀಕ್ಷಿಸಲು ಹಾಜರಿದ್ದರು ಎಂದು ತಿಳಿದುಬಂದಿದೆ.

ಯುನೈಟೆಡ್ ಎಫ್ ಸಿ ನೆಲ್ಲಿಕುತ್ ಮತ್ತು ರಾಯಲ್ ಟ್ರಾವೆಲ್ ಕೋಝಿಕ್ಕೋಡ್ ನಡುವಿನ ಫೈನಲ್ ಪಂದ್ಯದ ವೇಳೆ ಈ ಅವಘಡ ಸಂಭವಿಸಿದೆ.

ಅತಿ ಜನಸಂದಣಿ ಘಟನೆಗೆ ಕಾರಣ ಎನ್ನಲಾಗಿದೆ. ಸಂಘಟಕರು ಇಷ್ಟು ಜನರನ್ನು ನಿರೀಕ್ಷಿಸಿರಲಿಲ್ಲ ಮತ್ತು ಅವರನ್ನು ನಿಯಂತ್ರಿಸಲು ಮೈದಾನದಲ್ಲಿ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!