ಬಂಟ್ವಾಳ: ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಪೊಲೀಸ್ ವಶಕ್ಕೆ
ಬಂಟ್ವಾಳ: ಶಾಲಾ ಬಾಲಕಿಯೋರ್ವಳ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ವಶಕ್ಕೆ ಪಡೆದುಕೊಂಡ ಘಟನೆ ಪಲ್ಲಮಜಲು ಎಂಬಲ್ಲಿ ಇಂದು ಸಂಜೆ ವೇಳೆ ನಡೆದಿದೆ.
ಆರೋಪಿ ಪಲ್ಲಮಜಲು ನಿವಾಸಿ ಝಾಕೀರ್ (22)ಬಂಧಿತ ಆರೋಪಿ.
ಐದನೇ ತರಗತಿ ಬಾಲಕಿಯೋರ್ವಳು ಶಾಲಾ ಅವಧಿ ಮುಗಿಸಿ ಅ ಬಳಿಕ ಟ್ಯೂಷನ್ ಕ್ಲಾಸ್ ಗೆ ಹೋಗಿ ಬರುವ ವೇಳೆ ಆರೋಪಿ ಯತ್ನ ಮಾಡಿದ್ದಾನೆ ಎಂದು ಈಕೆಯ ಮನೆಯವರು ದೂರು ನೀಡಿದ್ದಾರೆ.
ಆರೋಪಿ ಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು ಈತನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




