February 4, 2026

ತೊಕ್ಕೊಟ್ಟು ಶಾಪಿಂಗ್ ಕಾಂಪ್ಲೆಕ್ಸ್’ನಲ್ಲಿ ಬೆಂಕಿ ದುರಂತ

0
image_editor_output_image1563163066-1647712491618.jpg

ಮಂಗಳೂರು: ತೊಕ್ಕೊಟು ಸಮೀಪದ ಚೆಂಬುಗುಡ್ಡೆ ಮಸೀದಿ ಅಧೀನದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್’ನಲ್ಲಿ ಶನಿವಾರ ರಾತ್ರಿ ಭಾರಿ ಅಗ್ನಿ ದುರಂತ ಸಂಭವಿಸಿದೆ.
ಕಟ್ಟಡದ ಸಮೀಪವೇ ಮೆಸ್ಕಾಂ ಕಚೇರಿ ಇದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಏರಿದ್ದು, ಸುತ್ತಲೂ ಭಾರೀ ಹೊಗೆ ಆವರಿಸಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ‌ ನಂದಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!