February 4, 2026

ಸಂಘಪರಿವಾರದವರು ಗೋಡ್ಸೆ ಮತ್ತು ಸಾವರ್ಕರ್ ಅನುಯಾಯಿಗಳು: ಬಂಟ್ವಾಳದಲ್ಲಿ ಸಿದ್ದರಾಮಯ್ಯ

0
image_editor_output_image1450493504-1647700383694.jpg

ಬಂಟ್ವಾಳ: ಗೋಡ್ಸೆ ವಂಶಸ್ಥರು ಸಾಮರಸ್ಯವನ್ನು‌ ಹಾಳು ಮಾಡಿದ್ದಾರೆ, ಸಂಘಪರಿವಾರದವರು, ಗೋಡ್ಸೆ ಮತ್ತು ಸಾವರ್ಕರ್ ಅನುಯಾಯಿಗಳು. ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಆರ್.ಎಸ್.ಎಸ್. ಹೋರಾಡಿ ದ ಸಾಕ್ಷಿಗಳು ಇವೆಯಾ? ಇವರಿಂದ ದೇಶ ಭಕ್ತಿ ಪಾಠ ಕಲಿಯಬೇಕಾ ?ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದರು.
ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂಘಟನೆಯ ಯುವಕನ
ಕೊಲೆಗೆ ರಾಜಕೀಯ ಬಣ್ಣ ಕಟ್ಟಿ ಅದರಿಂದ ಲಾಭ ಪಡೆಯಲು ಮುಂದಾಗುತ್ತಾರೆ.
ಈಶ್ವರಪ್ಪ ಎಂಬ ಪೆದ್ದ, ಮತಾಂದ , 144 ಸೆಕ್ಷನ್ ಇದ್ದರು ಶವ ಮೆರವಣಿಗೆ ಮಾಡಿದ್ದಾರೆ, ಜೊತೆಗೆ ಸರಕಾರದಿಂದ ಲಕ್ಷಾಂತರ ರೂ ಪರಿಹಾರವನ್ನು ನೀಡುವಂತೆ ಮಾಡಿದ ಅವರು ಬೆಳ್ತಂಗಡಿ ಯಲ್ಲಿ ನಡೆದ ದಿನೇಶ್ ಕೊಲೆಗೆ ಯಾಕೆ ಪರಿಹಾರ ನೀಡಲು ಒತ್ತಾಯಿಸಿಲ್ಲ, ಅದು ನಾನು ಮಾಡಿದ ಒತ್ತಾಯದಿಂದ ಸರಕಾರ ಅಲ್ಪಸ್ವಲ್ಪ ಪರಿಹಾರ ನೀಡಿದೆ ಎಂದು ಅವರು ಹೇಳಿದರು.

ಸಂವಿಧಾನ ವನ್ನು ಹೊಸಕುಹಾಕಲು ಪ್ರಯತ್ನ ಮಾಡಿದ ನಿಮಗೆ ಒಂದು ಪ್ರಶ್ನೆ ಮಾಡುತ್ತೇನೆ, ಸಂವಿಧಾನ ಇಲ್ಲದಿದ್ದರೆ ನೀವು ಪ್ರಧಾನ ಮಂತ್ರಿಯಾಗುತ್ತಿದ್ದೀರಾ ? ಎಂದು ಕೇಳಿದರು. ಸಂವಿಧಾನಕ್ಕೆ ಅಪಚಾರ ಮಾಡಿದ ಅನಂತ್ ಕುಮಾರ್ ಹೆಗ್ಡೆ ಯವರನ್ನು ಸಂಸದ ಸ್ಥಾನ ದಿಂದ ಯಾಕೆ ಕೆಳಗಿಳಿಸಿಲ್ಲ ಎಂದು ಪ್ರಶ್ನಿಸಿದರು.
ಯುವ ಸಮುದಾಯ ಬಿಜೆಪಿಯನ್ನು ಕಿತ್ತುಎಸೆಯುತ್ತೇವೆ ಎಂಬ ಸಂಕಲ್ಪವನ್ನು ಮಾಡಿದರೆ ಮಾತ್ರ ದೇಶ ರಾಜ್ಯ ಉಳಿಯುವುತ್ತೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗದ ಬಿಜೆಪಿ ಇರಬೇಕಾ? ಸಮಾಜ ಸಾಮರಸ್ಯದಿಂದ ಬದುಕಬೇಕಾದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

ಎಲ್ಲಾ ಧರ್ಮದ ಅಧಾರದ ಮೇಲೆ ದೇಶ ನಿಂತಿದೆ.
ನರೇಂದ್ರ ಮೋದಿಯವರು ಓರ್ವ ಸುಳ್ಳುಗಾರ ಪ್ರಧಾನ ಮಂತ್ರಿ.
ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಉದ್ಯೋಗದ ಬಗ್ಗೆ ಮಾತನಾಡದೆ ಕಾಶ್ಮೀರಿ ಫೈಲ್ಸ್ ನಿಂದ ಹಿಡಿದು ಕೇವಲ ಎಮೋಸನಲ್ ಸಂಗತಿ ಬಗ್ಗೆ ಮಾತ್ರ ಮಾತನಾಡುತ್ತಾರೆ.
ಯುವಕರು ದೇಶದ ಭವಿಷ್ಯವನ್ನು ರೂಪಿಸುವರು, ದೇಶವನ್ನು ಕಟ್ಟುವರು, ಅವರು ಜಾತ್ಯತೀತ ಎಂಬ ತತ್ವದಡಿಯಲ್ಲಿ ಸಂಘಟಿತರಾಗಬೇಕಾಗಿದೆ ಎಂದು ಅವರು ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿಬಿಟ್ಟಿದ್ದು, ಸಮಾಜದಲ್ಲಿ ಸಾಮರಸ್ಯ ವನ್ನು ಉಳಿಸಬೇಕಾಗಿದೆ, ಶಾಂತಿ, ನೆಮ್ಮದಿ ಇದ್ದರೆ ಮಾತ್ರ ದೇಶ ಅಭಿವೃದ್ಧಿ ಯಾಗಲು ಸಾಧ್ಯ ಅಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ದಿಂದ ಒಂದೇ ತಾಯಿ ಮಕ್ಕಳಂತೆ ಜೀವನ ಮಾಡಬೇಕಾಗಿದೆ.
ಜಾತಿ ವ್ಯವಸ್ಥೆ ಯಷ್ಟು ಅಮಾನವೀಯ ಸ್ಥಿತಿ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ಮನಸ್ಕುತಿಯ ಫಲವಾಗಿ ಸಮಾಜದಲ್ಲಿ ಜಾತಿ ಅಂಟಿಕೊಂಡು ಬಂದಿದೆ.ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳು ಜಾತಿ ವ್ಯವಸ್ಥೆ ಹುಟ್ಟು ಹಾಕಿದರು. ಜಾತಿ ಧರ್ಮಕ್ಕಾಗಿ ಒಡೆದಾಟ ಮಾಡುವುದನ್ನು ನಿಲ್ಲಿಸಿ ಈ ದೇಶದ ಅಭಿವೃದ್ಧಿ ಗಾಗಿ ಒಂದಾಗಿ ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ‌.ರಮಾನಾಥ ರೈ ಪ್ರಸ್ತಾವಿಕವಾಗಿ ಮಾತನಾಡಿ , ಕಾಂಗ್ರೇಸ್ ಪಕ್ಷ ಸಮಾಜದ ಎಲ್ಲಾ ವರ್ಗದವರನ್ನು ಪ್ರೀತಿ ಮಾಡಿದ ಏಕೈಕ ಪಕ್ಷವಾಗಿದ್ದು, ದೇಶದ ಜಾತ್ಯಾತೀತ ಚಳುವಳಿ ಯನ್ನು ಬಲಿಷ್ಠ ಗೊಳಿಸಬೇಕು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ.
ಭೂಮಸೂದೆ ಕಾನೂನಿನಡಿಯಲ್ಲಿ ಅತ್ಯಂತ ಹೆಚ್ಚು ಭೂಮಿ ಪಡೆದ ಜನ ಇದ್ದರೆ ಅದು ದ.ಕ.ಜಿಲ್ಲೆಯವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ 94 ಸಿ‌. ಹಕ್ಕು ಪತ್ರ ಪಡೆದವರು ಬಂಟ್ವಾಳದ ಜನತೆ ಅವರ ಸಹಕಾರವನ್ನು ಮರೆಯಬಾರದು.
ಮುಂದಿನ ಭವ್ಯ ಭಾರತಕ್ಕಾಗಿ ಸಾಮರಸ್ಯ ದ ಭಾವೈಕ್ಯ ತೆಯ ಜಾತ್ಯತೀತ ಸಂಘಟನೆ ಯ ಜೊತೆ ಯುವಕರು ಕೆಲಸ ಮಾಡಿ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಿ.ಎ.ರಹಮಾನ್,ಎಸ್. ಮಹಮ್ಮದ್ ಶಾಫಿ
ಬಿ.ಮೋಹನ್ ಅವರು ಕಾಂಗ್ರೇಸ್ ಸೇರ್ಪಡೆಯಾದರು.
ವಿನಯಕುಮಾರ್ ಸೊರಕೆ, ಮಂಜುನಾಥ ಭಂಡಾರಿ , ಮೊಯಿದ್ದೀನ್ ಭಾವ, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಸುದೀರ್ ಮರೊಳಿ, ಮಹಮ್ಮದ್ ನವಾಜ್, ಶಾಲೆಟ್ ಪಿಂಟೋ, ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಸುರೇಶ್ ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್ ಮಹಮ್ಮದ್, ಕೃಪಾಆಮರ್ ಅಳ್ವ, ಅಬ್ಬಾಸ್ ಆಲಿ, ಬೇಬಿಕುಂದರ್, ಸುದೀಪ್ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!