ಬೆಳ್ತಂಗಡಿ: ಹತ್ಯೆಗೀಡಾದ ದಲಿತ ಯುವಕ ದಿನೇಶ್ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ: ವೈಯುಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ವಿತರಣೆ
ಬೆಳ್ತಂಗಡಿ: ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ ಹಾಗೂ ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಅವರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಇಂದು ನೀಡಿದ್ದಾರೆ.
ಭೇಟಿಯ ವೇಳೆ ಕುಟುಂಬದವರಿಗೆ ಸಾಂತ್ವನ ಹೇಳಿ, ಮಕ್ಕಳನ್ನು ಓದಿಸಿ ಎಂದು ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂ.ಗಳನ್ನು ಮೃತನ ಕುಟುಂಬದವರಿಗೆ ನೀಡಿದರು.
ಈ ವೇಳೆ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಜರಿದ್ದರು.





