ಸುಳ್ಯ: ಕೊಲ್ಲಮೊಗ್ರ ನಲ್ಲಿ ಆನೆ ದಾಳಿ
ಯುವಕ ಜಖಂ
ಸುಳ್ಯ: ತಾಲೂಕು ಕೊಲ್ಲಮೊಗ್ರ ಗ್ರಾಮದ ಕೋನಡ್ಕ ಎಂಬಲ್ಲಿ ಯುವಕನೊಬ್ಬನ ಮೇಲೆ ಆನೆ ದಾಳಿ ನಡೆಸಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಕೊಲ್ಲಮೊಗ್ರ ದಿಂದ ವರದಿಯಾಗಿದೆ .
ಕೋನಡ್ಕದ ಗುರುಪ್ರಸಾದ್ ಎಂಬ ಯುವಕ ಇಂದು ಮುಂಜಾನೆ 7 ಗಂಟೆಗೆ ಮನೆಯಿಂದ ಹಾಲು ತೆಗೆದುಕೊಂಡು ಬರುತ್ತಿರುವಾಗ ತೋಟದಿಂದ ಗುಡ್ಡಕ್ಕೆ ಹತ್ತಿ ಹೋಗುತ್ತಿದ್ದ ಆನೆ ಎದುರಾಗಿ ಈತನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಗಾಯಗೊಂಡಿರುವ ಯುವಕ ಗುರುಪ್ರಸಾದ್ ರನ್ನು ಸ್ಥಳೀಯರು ಮತ್ತು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆ ಮುಂದುವರೆದಿದೆ.





