February 3, 2026

ಕುಂದಾಪುರ: ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ

0
image_editor_output_image233315538-1647068099544.jpg

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಕೊರ್ಗಿ ಗಿರಿಜಾ ಚಂದ್ರಶೇಖರ್‌ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್‌ ಸಂಪರ್ಕ ತಂತಿ ತಗುಲಿ ಅಗ್ನಿ ಆಕಸ್ಮಿಕವಾಗಿ ಹಾನಿಯಾದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಪರಿಣಾಮ ವಾಹನದಲ್ಲಿದ್ದ ಸುಮಾರು ರೂ.30 ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಶಿಕಾರಿಪುರದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ನಿವಾಸಕ್ಕೆ ಜಾನುವಾರುಗಳ ಮೇವಿಗಾಗಿ ಬೈಹುಲ್ಲು ಸಾಗಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲಾ ಸಮೀಪದಲ್ಲಿ ಬರುತ್ತಿದ್ದಂತೆ ವಿದ್ಯುತ್‌ ಸಂಪರ್ಕ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.

Leave a Reply

Your email address will not be published. Required fields are marked *

error: Content is protected !!