ದಾಳಿಗೆ ಬಂದಿದ್ದ ಅರಣ್ಯಾಧಿಕಾರಿಗಳನ್ನು ಮನೆಯಲ್ಲಿಯೇ ದಿಗ್ಭಂದನ ಹಾಕಿದ ಗ್ರಾಮಸ್ಥರು
ಮುಂಡಗೋಡ: ಮನೆಯೊಂದರಲ್ಲಿ ಜಿಂಕೆಯ ಮಾಂಸ ಇದೆ ಎಂಬ ಮಾಹಿತಿಯ ಮೇಲೆ ದಾಳಿಗೆಂದು ಬಂದಿದ್ದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗ್ರಾಮಸ್ಥರು ಮನೆಯಲ್ಲಿಯೇ ಎರಡು ತಾಸು ದಿಗ್ಭಂದನ ಹಾಕಿದ ಘಟನೆ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ ಗ್ರಾಮದ ಕೆಲವರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮರಳಿದ್ದಾರೆ. ಇದನ್ನು ನೋಡಿ ಜಿಂಕೆ ಬೇಟೆ ಆಡಿದ್ದಾರೆ ಎಂದು ಸಂಶಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದೇ ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ ಇತರ ಸಾಮಗ್ರಿ ಪತ್ತೆಯಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿಯ ನೇತೃತ್ವ ವಹಿಸಿದ್ದ ಆರ್.ಎಫ್.ಓ ಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗೆ ಮನೆಯಲ್ಲಿಯೇ ದಿಗ್ಭಂದನ ಹಾಕಿದ್ದಾರೆ.




