ಸುಳ್ಯ ಬಾಳೆಮಕ್ಕಿ ಬಳಿ ಗೂಡ್ಸ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಬೈಕ್, ಬೈಕ್ ಸವಾರ ಗಂಭೀರ
ಸುಳ್ಯ: ಸೋಣಂಗೇರಿ ಮೂಲದ ವ್ಯಕ್ತಿಯೋರ್ವರ ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುವ ಆಟೋರಿಕ್ಷಾ ಟೆಂಪೋ ಗೆ ಕಂದಡ್ಕ ಮೂಲದ ವ್ಯಕ್ತಿಯ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಬಾಳೆಮಕ್ಕಿ ಟ್ಯಾಕ್ಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.
ಸುಳ್ಯ ಬಾಳೆಮಕ್ಕಿ ಬಳಿ ಹಳೆಗೇಟು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಟೆಂಪೋ ರಿಕ್ಷದ ಹಿಂಭಾಗಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಗುದ್ದಿದ ಪರಿಣಾಮ ಘಟನೆ ಸಂಭವಿಸಿದೆ.
ಈ ಸಂದರ್ಭದಲ್ಲಿ ಟ್ಯಾಕ್ಸಿ ನಿಲ್ದಾಣದ ಕೆಲ ಚಾಲಕರು ಸೇರಿ ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಶಿವ ಆಂಬುಲೆನ್ಸ್ ವಾಹನದ ಮೂಲಕ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.





