ಇಸ್ಲಾಮಿಕ್ ವಿದ್ವಾಂಸ, ಮುಖಂಡ, ರಾಜಕೀಯ ನಾಯಕ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ನಿಧನ
ಕೇರಳ: ಕೇರಳದ ಇಸ್ಲಾಮಿಕ್ ವಿದ್ವಾಂಸ, ಮುಖಂಡ ಹಾಗೂ ರಾಜಕೀಯ ನಾಯಕರಾಗಿದ್ದ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ (74) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಜೂನ್ 15, 1947 ರಂದು ಪಾಣಕ್ಕಾಡ್‌ನ ಕೊಡಪ್ಪನಕ್ಕಲ್‌ನಲ್ಲಿ ಜನಿಸಿದ ಅವರು ದಿವಂಗತ ಮಾಳಿಯೆಕ್ಕಲ್ ಸೈಯದ್ ಅಹ್ಮದ್ ಪೂಕೋಯ ತಂಙಳ್ (ಪಿಎಂಎಸ್‌ಎ ಪೂಕೋಯ ತಂಙಲ್) ಮತ್ತು ಮರಿಯಮ್ ಚೆರಿಂಞಿ ಬೀವಿಯವರ ಮೂರನೇ ಪುತ್ರರಾಗಿದ್ದರು.
ಶಂಸುಲ್ ಉಲಮಾ ಇ.ಕೆ.ಅಬೂಬಕರ್ ಮುಸ್ಲಿಯಾರ್, ಕೊಟ್ಟುಮಲ ಅಬೂಬಕರ್ ಮುಸ್ಲಿಯಾರ್, ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಮುಂತಾದವರೊಂದಿಗೆ ವಿದ್ಯಾಭ್ಯಾಸ ಪಡೆದಿದ್ದರು.




