March 22, 2026

ವಿಟ್ಲ: ಇಂದು ಮಜ್ಲಿಸುನ್ನೂರು ವಾರ್ಷಿಕೋತ್ಸವ-ಅನ್ನದಾನ-ಬುರ್ದಾ ಮಜ್ಲೀಸ್

0
image_editor_output_image1106254716-1646555462092

ವಿಟ್ಲ: ವಿಟ್ಲ ಜಮಾಅತ್ ಯೂತ್ ವಿಂಗ್
ಆಶ್ರಯದಲ್ಲಿ ಮಾಸಿಕ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಇಂದು ಸಂಜೆ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಸಯ್ಯಿದ್ ಇಬ್ರಾಹೀಂ ಬಾತಿಷ ತಂಙಳ್
(ಪ್ರೊಫೆಸರ್, ಸಂಶುಲ್ ಉಲಮಾ ವಾಫೀ ಅರೇಬಿಕ್ ಕಾಲೇಜು ಕಿನ್ಯ) ಮತ್ತು ಸಯ್ಯಿದ್ ಹಬೀಬು ರಹಿಮಾನ್ ತಂಙಳ್ ಮುಕ್ವೆ
(ಮುದರ್ರಿಸ್ ಮುಕ್ವೆ) ನೇತೃತ್ವ ವಹಿಸಲಿದ್ದಾರೆ.

ಬುರ್ದಾ ಮಜ್ಲೀಸ್ ಮತ್ತು ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶೇಕ್ ಮಹಮ್ಮದ್ ಇರ್ಫಾನಿ ಫೈಝಿ, ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಆಲಿ ಫೈಝಿ ಇರ್ಫಾನಿ ಮೊದಲಾದವರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!