July 6, 2026

ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನ ಮೀಸಲು

0
Screenshot_2022-03-04-14-12-09-26_680d03679600f7af0b4c700c6b270fe7.jpg

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರುಪಾಯಿ ಸಿಕ್ಕಿದೆ. 

ಬಜೆಟ್ ಮಂಡನೆಯಲ್ಲಿ ಮೊದಲಿಗೆ ಕೃಷಿ ಕ್ಷೇತ್ರದ ಅನುದಾನವನ್ನು ಘೋಷಿಸಿದರು. 

ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಘೋಷಣೆ ಮಾಡಿದ ಸಿಎಂ ಬಿಎಸ್ ಬಸವರಾಜ ಬೊಮ್ಮಾಯಿ ಅವರು, ರೈತ ಶಕ್ತಿ ಹೊಸ ಯೋಜನೆಯನ್ನು ಘೋಷಿಸಿದರು.

2 ಲಕ್ಷ ಹೆಕ್ಟೇರ್ ಗಳಲ್ಲಿ ಸಾವಯವ ಕೃಷಿ ಆರಂಭ. 
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ವಿವಿ ಸ್ಥಾಪನೆ. ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ.
1 ಸಾವಿರ ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪಿಸಲು 50 ಕೋಟಿ
ಕುರಿಗಾರರಿಗೆ ಕುರಿದೊಡ್ಡಿ ನಿರ್ಮಿಸಲು ಸಹಾಯಧನ. ಕುರಿಗಾಯಿಗಳಿಗೆ 5 ಲಕ್ಷ ರೂಪಾಯಿ ವಿಮೆ
ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ.
ಕೃಷಿ ಇಲಾಖೆಗೆ 8,457 ಕೋಟಿ ರೂಪಾಯಿ

ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.
ರೈತರಿಗೆ 2 ಸಾವಿರ ಗೋತಳಿಗಳ ವಿತರಣೆ. ಗೋವು ಉತ್ಪನ್ನಗಳ ವಿತರಣೆಗೆ ಗೋವು ಸಹಕಾರ ಸಂಘ ಸ್ಥಾಪನೆ

Leave a Reply

Your email address will not be published. Required fields are marked *

You may have missed

error: Content is protected !!