March 22, 2026

ದಾಂಡೇಲಿ: ಮರಕ್ಕೆ ಢಿಕ್ಕಿ ಹೊಡೆದ ಸೈಕಲ್, ಛತ್ತೀಸಗಡ ಮೂಲದ ಯುವತಿ ಮೃತ್ಯು

0
image_editor_output_image-1274797897-1646372581824.jpg

ದಾಂಡೇಲಿ: ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಛತ್ತೀಸಗಡ ಮೂಲದ ದೇವಿಕಾ ಸಂಜಯ ವಾಸ್ವಾನಿ (25) ಎಂಬುವವರು ಸಮೀಪದ ಬೀರಂಪಾಲಿ ಬಳಿ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬೀರಂಪಾಲಿ ಗ್ರಾಮದಲ್ಲಿರುವ ಹೋಂ ಸ್ಟೇದಿಂದ ಸೈಕ್ಲಿಂಗ್ ಮಾಡುತ್ತಾ ಅವರು ಅಕೋಡಾ ಗ್ರಾಮದ ಕಡೆ ಹೋಗುತ್ತಿದ್ದರು. ಆಗ ಸೈಕಲ್ ಸ್ಕಿಡ್‌ ಆಗಿ, ವೇಗವನ್ನು ನಿಯಂತ್ರಿಸಲಾಗಲಿಲ್ಲ. ಬಳಿಕ, ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಸೈಕಲ್ ಡಿಕ್ಕಿ ಹೊಡೆಯಿತು. ಅವರ ಬಲ ತೋಳು, ತಲೆಯ ಹಿಂಬದಿಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟರು.

ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!