March 22, 2026

ಪುತ್ತೂರು: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

0
image_editor_output_image270293857-1646373030703.jpg

ಪುತ್ತೂರು: ಪುತ್ತೂರು ತಾಲೂಕಿನ ಕಾಣಿಯೂರು ಎಂಬಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಬಂಡಾಜೆ ಗ್ರಾಮದ ಚಂದ್ರಶೇಖರ್ (57) ಎಂದು ಗುತುತಿಸಲಾಗಿದೆ.

ಯುವತಿಯ ಸಹೋದರ ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸದ ಬಗ್ಗೆ ತಂದೆ, ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭ ಬುದ್ಧಿಮಾಂದ್ಯ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದರು.

ಚಾರ್ವಾಕದಿಂದ ವಾಪಸು ಮನೆಗೆ ಬಂದಾಗ ಮನೆಯಲ್ಲಿದ್ದ ಅಕ್ಕ ಕಾಣದೇ ಇದ್ದಾಗ ಹುಡುಕುತ್ತಿರುವ ವೇಳೆ ಮನೆಯ ಎದುರಿನ ಗುಡ್ಡದಿಂದ ಬರುತ್ತಿದ್ದು, ಆಕೆಯನ್ನು ವಿಚಾರಿಸಿದಾಗ ಆರೋಪಿ ಚಂದ್ರಶೇಖರ ನೀನು ನನ್ನ ಜತೆ ಗುಡ್ಡಕ್ಕೆ ಬರಬೇಕು. ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ ಎಂದು ಬೆದರಿಸಿ ಕರೆದೊಯ್ದಿದ್ದಾನೆ ಎಂದು ಆಕೆ ತಿಳಿಸಿರುವುದಾಗಿ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!