February 2, 2026

ಕಟ್ಟಡದಲ್ಲಿ ಭಾರಿ ಸ್ಫೋಟ: ಐದು ಮಂದಿ ಮೃತ್ಯು, 8 ಮಂದಿ ಗಾಯ

0
image_editor_output_image1133293307-1646370103382.jpg

ಭಾಗಲ್ಪುರ್: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಕುಸಿದು ಕನಿಷ್ಠ ಐದು ಜನರು ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಕುಸಿದ ಕಟ್ಟಡದ ಅವಶೇಷಗಳಡಿ ಹತ್ತರಿಂದ 15 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಮಾಯಗಂಜ್‌ನ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ನಾಶವಾದ ಕಟ್ಟಡದ ನಿವಾಸಿಗಳು ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದರು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದು, ಸ್ಫೋಟಕ್ಕೆ ಗನ್‌ಪೌಡರ್, ಅಕ್ರಮ ಪಟಾಕಿಗಳು ಮತ್ತು ಕಟ್ಟಡದಲ್ಲಿ ಸಂಗ್ರಹಿಸಲಾದ ದೇಶಿ ನಿರ್ಮಿತ ಬಾಂಬ್‌ ಗಳು ಎಂದು ಭಾಗಲ್ಪುರ ರೇಂಜ್ ಡಿಐಜಿ ಸುಜಿತ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!