February 2, 2026

ಹಿಜಾಬ್ ಧಾರಣೆ ಇಸ್ಲಾಮಿನ ಆದೇಶ, ಅದರಲ್ಲಿ ರಾಜಿ ಸಾಧ್ಯವಿಲ್ಲ: ಎಪಿ ಉಸ್ತಾದ್

0
images-38.jpeg

ಉಳ್ಳಾಲ: ಐಕ್ಯ ಮುಸ್ಲಿಂ ಸಮಾಜಕ್ಕೆ ಅತ್ಯಂತ ಪ್ರಸ್ತುತ ಎನಿಸಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಹಿಜಾಬ್ ಧಾರಣೆ ಇಸ್ಲಾಮಿನ ಆದೇಶವಾಗಿದೆ ಅದರಲ್ಲಿ ಎಳ್ಳಷ್ಟೂ ರಾಜಿ ಸಾಧ್ಯವಿಲ್ಲ ಎಂದು ಸುಲ್ತಾನ್ ಉಲೇಮಾ ಎ.ಪಿ ಉಸ್ತಾದ್ ಹೇಳಿದರು.

ಅವರು ಉಳ್ಳಾಲ ಉರೂಸ್ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ, ಉಳ್ಳಾಲ ದರ್ಗಾ ಉರೂಸ್ ನಲ್ಲಿ ಕಂಡು ಬಂದ ಒಗ್ಗಟ್ಟು  ಚಿರಸ್ಥಾಯಿಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ‌ಶಾಸಕ ಯು.ಟಿ.ಖಾದರ್,   ನ್ಯಾಯವಾದಿ ಕೆ.ಪಿ.ಅಬ್ದುಲ್ ಶುಕೂರ್,  ಯೇನಪೋಯ ಅಬ್ದುಲ್ಲ ಕುಂಞಿ, ಕಣಚೂರು ಮೋನು ಹಾಜಿಯವರನ್ನು ಉಳ್ಳಾಲ ದರ್ಗಾ ಆಡಳಿತ ಸಮಿತಿ ಪರವಾಗಿ  ಸನ್ಮಾನಿಸಲಾಯಿತು.

ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣಗೈದರು. ಶೈಖುನಾ ಇಂಬಿಚ್ಚಿ ಹಾಮಿದ್ ಕೋಯ ರವರ ದುಆ ನೆರವೇರಿಸಿದರು.

ಉಡುಪಿ ಖಾಝಿ ಮಾಣಿ ಉಸ್ತಾದ್, ಶೈಖುನಾ ಉಸ್ಮಾನ್ ಫೈಝಿ, ಹಾಜಿ ಯು.ಕೆ.ಮೋನು ಕಣಚೂರು, ಅಬ್ದುಲ್ ಮಜೀದ್ ಮದನಿ,  ಇಮಾಮ್ ಅನ್ವರ್ ಅಲಿ ದಾರಿಮಿ, ಇಸ್ಮಾಯಿಲ್, ಯೇನಪೋಯ ಅಬ್ದುಲ್ಲ ಕುಂಞಿ, ಇಸ್ಮಾಯಿಲ್ ಫೈಝಿ, ಮುಮ್ತಾಝ್ ಅಲಿ, ಡಾ. ಇಫ್ತಿಕರ್ ಅಲಿ,  ಎಸ್.ಎಂ.ಆರ್ ರಶೀದ್ , ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಯು.ಎಸ್.ಹಂಝ, ಅಬ್ದುಲ್ ಖಾದರ್ ಸಖಾಫಿ, ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಉಪಾಧ್ಯಕ್ಷ  ಯು.ಕೆ.ಮೋನು, ಪ್ರ.ಕಾರ್ಯದರ್ಶಿ ತ್ವಾಹ ಹಾಜಿ, ಯು.ಟಿ.ಇಲ್ಯಾಸ್, ಅಮೀರ್ ಹಾಜಿ, ಹಾಜಿ ಬಾವ ಅಹ್ಮದ್, ಉದ್ಯಮಿ, ಅಬ್ದುಲ್ ಅಝೀಝ್ ಬಾವ, ಆಶೀಫ್ ಅಬ್ದುಲ್ಲ, ಅಯ್ಯೂಬ್ ಮಂಚಿಲ, ಮುಸ್ತಫ ಅಬ್ದುಲ್ಲ, ಯಾಕೂಬ್ ಶಿವಮೊಗ್ಗ, ಪಂಪ್ವೆಲ್ ಮಸೀದಿ ಇಮಾಮ್  ಅಬ್ದುಲ್ ರಹಿಮಾನ್ ಸಖಾಫಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!