February 1, 2026

ಪಶ್ಚಿಮ ಬಂಗಾಳ ನಗರ ಸ್ಥಳೀಯ ಚುನಾವಣೆಗಳಲ್ಲಿ ಟಿಎಂಸಿಗೆ ಗೆಲುವು: ಬಿಜೆಪಿ‌, ಕಾಂಗ್ರೆಸ್ ಗೆ ಭಾರೀ ಮುಖಭಂಗ

0
Screenshot_2022-03-03-11-41-11-93_680d03679600f7af0b4c700c6b270fe7.jpg

ಪಶ್ಚಿಮ ಬಂಗಾಳ: ಇಲ್ಲಿನ ನಗರ ಸ್ಥಳೀಯ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು, ಚುನಾವಣೆ ನಡೆದ 107 ಪುರಸಭೆಗಳ ಪೈಕಿ 103 ಪುರಸಭೆಗಳನ್ನು ಟಿಎಂಸಿ ಗೆದ್ದುಕೊಂಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿಯವರ ಭದ್ರಕೋಟೆಯಾಗಿದ್ದ ಕಂಠಿ ಪುರಸಭೆಯನ್ನು ಟಿಎಂಸಿ ಗೆದ್ದುಕೊಂಡಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ಇದೆಲ್ಲದರ ನಡುವೆ, ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಪಕ್ಷವು ಡಾರ್ಜಿಲಿಂಗ್ ಪುರಸಭೆಯನ್ನು ಗೆದ್ದುಕೊಂಡಿದ್ದು, ಅಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮಣಿಸಿದೆ. ಡಾರ್ಜಿಲಿಂಗ್ ಮುನ್ಸಿಪಾಲಿಟಿಯ ಒಟ್ಟು 32 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಜಿಜೆಎಂ ಗೆದ್ದುಕೊಂಡು ಅಧಿಕಾರ ಹಿಡಿದಿದೆ.

ಕೆಲವು ಪಟ್ಟಣಗಳಲ್ಲಿ ಕೆಲವು ವಾರ್ಡ್‌ಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗೆದ್ದಿದ್ದರೂ ಯಾವುದೇ ಪುರಸಭೆಯಲ್ಲಿ ಅಧಿಕಾರ ಹಿಡಿಯುವಷ್ಟ ಸ್ಥಾನಗಳನ್ನು ಗೆಲ್ಲಲಾಗಿಲ್ಲ.

ಸಿಪಿಐ (ಎಂ) ನೇತೃತ್ವದ ಎಡರಂಗವು ನಾಡಿಯಾ ಜಿಲ್ಲೆಯ ತಾಹೆರ್ಪುರ ಪುರಸಭೆಯಲ್ಲಿ ಗೆಲುವು ಸಾಧಿಸಿದೆ. ಅದು 27 ಪುರಸಭೆಗಳಲ್ಲಿ ಟಿಎಂಸಿ ಎಲ್ಲಾ ವಾರ್ಡ್‌ಗಳನ್ನು ಗೆದ್ದುಕೊಂಡಿದ್ದು, ಆ ಪುರಸಭೆಗಳಲ್ಲಿ ಪ್ರತಿಪಕ್ಷವೇ ಇಲ್ಲದಂತಾಗಿದೆ.

Leave a Reply

Your email address will not be published. Required fields are marked *

error: Content is protected !!