ನಾಳೆಯಿಂದ ಕನ್ಯಾನ ಉದಯಾಸ್ತಮಾನ ಉರೂಸ್ ಮತ್ತು 10 ದಿನಗಳ ಧಾರ್ಮಿಕ ಪ್ರವಚನ: ಕನ್ಯಾನ ಉರೂಸ್ ಕಮಿಟಿ ವತಿಯಿಂದ ಪತ್ರಿಕಾಗೋಷ್ಠಿ
ವಿಟ್ಲ: ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉದಯಾಸ್ತಮಾನ ಉರೂಸ್ ಮತ್ತು 10 ದಿನಗಳ ಧಾರ್ಮಿಕ ಪ್ರವಚನ ಮಾರ್ಚ್ 3ರಿಂದ ಮಾರ್ಚ್ 12 ರ ವರೆಗೆ ನಡೆಯಲಿದ್ದು, ಮಾರ್ಚ್ 13ರಂದು ಹಗಲು ಉರೂಸ್ ಮತ್ತು ಅನ್ನದಾನ ನಡೆಯಲಿದೆ ಎಂದು ಉರೂಸ್ ಕಮಿಟಿ ಸದಸ್ಯ ಕೆ.ಎಂ ಅಶ್ರಫ್ ಸಖಾಫಿ ಹೇಳಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚರಿತ್ರೆ ಪ್ರಸಿದ್ಧವಾದ ಕನ್ಯಾನ ರಹ್ಮಾನಿಯ್ಯ ಜುಮಾ ಮಸೀದಿಯ ಪಶ್ಚಿಮ ಭಾಗದಲ್ಲಿ ಅಂತ್ಯ ವಿಶ್ರಾಮಗೊಳ್ಳುತ್ತಿರುವ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ರವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉದಯಾಸ್ತಮಾನ ಉರೂಸ್ ನೇರ್ಚೆ ಖಾಝೀ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಉರೂಸ್ ಸಮಾರಂಭದಲ್ಲಿ ಮಾರ್ಚ್ 3 ರಂದು ಕನ್ಯಾನ ಮುದರ್ರಿಸ್ ಕೆ.ಎಂ ಇಬ್ರಾಹಿಂ ಫೈಝಿ ಮತ್ತು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಲ್ತೋಡಿ ಧ್ವಜಾರೋಹಣ ಮಾಡಲಿದ್ದಾರೆ. ಮಾರ್ಚ್ 12ರಂದು ಅಸ್ಸಯ್ಯಿದ್ ಮುಹಮ್ಮದ್ ಸುಹೈಲ್ ತಂಙಳ್ ಅಸ್ಸಖಾಫ್ ಮಡಕ್ಕರ ದುಆ ಆಶೀರ್ವಚನ ನೀಡಲಿದ್ದಾರೆ. ಹಂಝ ಮಿಸ್ಬಾಯಿ ಓಟಪ್ಪಡವು ಪ್ರಭಾಷಣ ಮಾಡಲಿದ್ದಾರೆ. ಶಾಫಿ ಸಅದಿ ಬೆಂಗಳೂರು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ಡಾ. ಅಬ್ದುಲ್ ಹಕೀಂ ಅಝ್ಹರಿ, ಡಾ, ಫಾರೂಕ್ ನಈಮಿ ಕೊಲ್ಲಂ, ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅದೇ ದಿನ ಸ್ನೇಹ ಸಂಗಮ ನಡೆಯಲಿದ್ದು, ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಶಾಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಯು.ಟಿ ಖಾದರ್, ಮಾಜಿ ಬಿ ರಮಾನಾಥ ರೈ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಲ್ತೋಡಿ, ಪ್ರಧಾನ ಕಾರ್ಯದರ್ಶಿ ಹಾಜಿ ಡಿ.ಕೆ ಇಬ್ರಾಹಿಂ ಷಾ, ಅಬ್ದುಲ್ ಮಜೀದ್ ಚೆಡಾವು, ಆಸೀಫ್ ಬನಾರಿ ಉಪಸ್ಥಿತರಿದ್ದರು.




