July 6, 2026

ವಿಟ್ಲ: ಗೂಡು ಮುರಿದು 75 ಕೆಜಿಯಷ್ಟು ಕೋಳಿ ಕದ್ದೊಯ್ದರು: ಚಿಕನ್ ದುಬಾರಿಯಾದಾಗ ಕಳ್ಳರ ಕಾಟ ಶುರು

0
IMG-20220302-WA0064.jpg

ಮಾಣಿ : ಇಲ್ಲಿನ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ ನಿಂದ ಸುಮಾರು 75 ಕೆಜಿಯಷ್ಟು ಕೋಳಿಯನ್ನು ಗೂಡನ್ನು ಮುರಿದು ಕದ್ದೊಯ್ದ ಘಟನೆ ಮಂಗಳವಾರ ನಡೆದಿದೆ.

ಮಾಲಕರು ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಘಟನೆ ನಡೆದ ಬಗ್ಗೆ ತಿಳಿದಿದೆ,ಈಗ ಕೋಳಿಗೆ ದುಬಾರಿ ಬೆಲೆ ಇದ್ದು 160 ಅಥವಾ 170 ರೂಪಾಯಿ ಮಾರಾಟ ಬೆಲೆಯಾಗಿದ್ದು ಅದೂ ಅಲ್ಲದೆ ಚಿಕನ್ ಸ್ಟಾಲ್ ಗಳೆಲ್ಲವೂ ಕಳೆದೆರಡು ತಿಂಗಳಿನಿಂದ ವ್ಯಾಪಾರ ವಿಲ್ಲದೆ ನಷ್ಟದಲ್ಲೇ ಮುಂದುವುರಿಯುತ್ತಿದ್ದು ಇಂತಹ ಸಂದರ್ಭದಲ್ಲಿ ಕಳ್ಳತನ ನಡೆದರೆ ಅಂಗಡಿಯವರ ಸ್ಥಿತಿ ಊಹಿಸಲೂ ಅಸಾಧ್ಯ,ಕಳ್ಳತನ ನಡೆಸಿದ ಕೋಳಿಗಳನ್ನು ಯಾವುದಾದರೂ ಅಂಗಡಿಗೆ ಮಾರಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ವಿಟ್ಲ ಪೋಲೀಸರು ಬಂದು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!