February 1, 2026

ಉಕ್ರೇನ್ ನ ಮತ್ತೊಂದು ವಾಯುನೆಲೆಗೆ ಫಿರಂಗಿ ದಾಳಿ: 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು, 136 ನಾಗರಿಕರ ಸಾವು

0
Screenshot_2022-03-02-10-58-09-64_680d03679600f7af0b4c700c6b270fe7.jpg

ಕೀವ್: ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿ ಆರನೇ ದಿನವಾಗಿದ್ದು, ಮೈಲುಗಟ್ಟಲೇ ದೂರದ ಟ್ಯಾಂಕರ್ ಗಳು ಮತ್ತು ಶಸಾಸ್ತ್ರ ಹೊತ್ತ ವಾಹನಗಳೊಂದಿಗೆ ಉಕ್ರೇನ್ ರಾಜಧಾನಿ ಸನಿಹಕ್ಕೆ ತಲುಪಿದ್ದು, ಯುದ್ಧ ಭೂಮಿಯಲ್ಲಿ ಹೋರಾಟವನ್ನು ತೀವ್ರಗೊಳಿಸಿದೆ. 

ಉಕ್ರೇನ್ ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾಪಡೆ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಶೆಲ್ಲಿಂಗ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ರಷ್ಯಾ ಇತ್ತೀಚಿಗೆ ಖಾರ್ಕಿವ್ ಮತ್ತು ಕೀವ್ ಮಧ್ಯದಲ್ಲಿರುವ ಓಖ್ಟಿರ್ಕಾ ವಾಯುನೆಲೆಯಲ್ಲಿ ನಡೆಸಿದ ಫಿರಂಗಿ ದಾಳಿಯಲ್ಲಿ 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

 ಆದರೆ, ಉಕ್ರೇನ್ ಸೈನಿಕರು ಕೂಡಾ ತೀವ್ರ ಪ್ರತಿರೋಧ ನೀಡುತ್ತಿದ್ದಾರೆ. ಕುತೂಹಲವೆಂದರೆ ವಾಯು ಮಾರ್ಗದಲ್ಲಿ ರಷ್ಯಾ ಪ್ರಾಬಲ್ಯ ಸಾಧಿಸಲು ಆಗುತ್ತಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳು ವಾಯು ಮಾರ್ಗ ಮುಚ್ಚಿರುವ ಕಾರಣದಿಂದ ರಷ್ಯಾದಲ್ಲಿ ಆತಂಕ ಹೆಚ್ಚಾಗಿದೆ.

ಉಕ್ರೇನ್ ನ ಅಂಡರ್ ಗ್ರೌಂಡ್, ನೆಲ ಅಂತಸ್ತು ಮತ್ತಿತರ ಕಡೆಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಯುದ್ದದಿಂದ ತೊಂದರೆಗೊಳಾದ ಜನರಿಗೆ ನೆರವಾಗಲು  272 ಮಿಲಿಯನ್ ಡಾಲರ್ ನೆರವಿಗೆ ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ. 

Leave a Reply

Your email address will not be published. Required fields are marked *

error: Content is protected !!