ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ನಾಲ್ವರು ಸ್ನೇಹಿತರು ಮೃತ್ಯು

ಸಂಕೇಶ್ವರ : ನಗರದ ಹೊರ ವಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃಪಟ್ಟಿರುವ ಘಟನೆ ನಡೆದಿದೆ.
ರಾತ್ರಿ 11.30 ರ ವೇಳೆ ನಡೆದ ಭೀಕರ ಅವಘಡದಲ್ಲಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಸ್ಥಳದಲ್ಲಿಯೇ ಅಸುನಿಗಿದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ದುರ್ದೈವಿಗಳು ಬಸವರಾಜ ಮಾಳಿ(26), ಪ್ರವೀಣ ಸನದಿ(29), ಮೆಹಬೂಬ ಸೆಗಡಿ(21), ಫರಾಣ ಜಮಾದಾರ (21) ಎನ್ನುವವರಾಗಿದ್ದಾರೆ.
ತಡರಾತ್ರಿ ನಾಲ್ವರು ಗೆಳೆಯರು ದ್ವಿಚಕ್ರ ವಾಹನದಲ್ಲಿ ಕಣಗಲಾ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವಾಗ ಸಂಕೇಶ್ವರ ನಗರದ ಹೊರ ವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಆವಘಡ ನಡೆದಿದೆ.
ಯಾವ ವಾಹನ ಢಿಕ್ಕಿಯಾಗಿ ಅವಘಡ ನಡೆದಿದೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಸ್ಥಳದಲ್ಲಿ ಯುವಕರು ಪ್ರಯಾಣಿಸುತ್ತಿದ್ದ ಬೈಕ್ ಜಖಂ ಆಗಿ ಬಿದ್ದಿರುವುದು ಕಂಡು ಬಂದಿದೆ.