ಉಳ್ಳಾಲ: ಸಾಮಾಜಿಕ ಕಾರ್ಯಕರ್ತನಿಗೆ ಗ್ರಾ.ಪಂ ಸದಸ್ಯನ ತಂಡ ಹಲ್ಲೆ
ಉಳ್ಳಾಲ: ಕಾಮಗಾರಿಯಲ್ಲಿ ಕಳಪೆಯಿದೆ ಎಂದು ಆರೋಪಿಸಿ ,ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತನಿಗೆ ತಲಪಾಡಿ ಗ್ರಾ.ಪಂ ಸದಸ್ಯನ ನೇತೃತ್ವದ ತಂಡ ಹಲ್ಲೆ ನಡೆಸಿರುವ ಘಟನೆ ತಲಪಾಡಿ ದೇವಿಪುರ ಬಳಿ ಮಂಗಳವಾರ ನಡೆದಿದೆ.
ತಲಪಾಡಿ ದೇವಿಪುರ ನಿವಾಸಿ ಯಶು ಪಕಳ ಹಲ್ಲೆಗೊಳಗಾದ ಸಾಮಾಜಿಕ ಕಾರ್ಯಕರ್ತ. ಇದೇ ವೇಳೆ ತಲಪಾಡಿ ಗ್ರಾ.ಪಂ ಸದಸ್ಯ ಶೈಲೇಶ್ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವಿಪುರ ಸಮೀಪ ನಡೆಯುತ್ತಿದ್ದ ಮೋರಿಯೊಂದರ ಕಾಮಗಾರಿಯನ್ನು ಕಳಪೆ ಎಂದು ಆರೋಪಿಸಿ ಯಶು ಪಕಳ ವೀಕ್ಷಣೆಗೆ ತೆರಳಿದ್ದರು.
ಈ ವೇಳೆ ಪಂ.ಸದಸ್ಯ ಶೈಲೇಶ್ ನೇತೃತ್ವದಲ್ಲಿ ಬಂದ ಎಂಟು ಮಂದಿಯ ತಂಡ ಯಶು ಪಕಳ ಅವರಿಗೆ ಹಲ್ಲೆ ನಡೆಸಿದ್ದು, ಇದೇ ವೇಳೆ ಯಶು ಪಕಳ ಅವರು ವಾಪಸ್ಸು ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಇಬ್ಬರೂ ನಾಟೆಕಲ್ ಮತ್ತು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.




