ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ: ಈಶ್ವರಪ್ಪ
ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಹುಡುಗರನ್ನು ಕೊಲೆ ಮಾಡುತ್ತಿದ್ದರು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ. ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಎನ್ ಐಎ ಮೂಲಕ ಮಾಡಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಗುಂಡಾಗಳು ಎನ್ನುವ ಪದವನ್ನು ಮತ್ತೆ ಸಮರ್ಥನೆ ಮಾಡಿಕೊಂಡರು.
“ಕೊಲೆಯಾದ ಸಮಯದಲ್ಲಿಎಸ್ ಪಿ ಗೆ ಕರೆ ಮಾಡಿದ್ದೆ, ಮುಸ್ಲಿಂಮರೇ ಕೊಲೆ ಮಾಡಿದ್ದಾರೆಂದು ಅವರು ಮಾಹಿತಿ ನೀಡಿದ್ದರು. ಸುತ್ತಮುತ್ತಲಿನ ಜನ ಕೂಡ ಅದೇ ಮಾತನ್ನು ಹೇಳಿದ್ದರು. ಹೀಗಾಗಿ ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಎನ್ನುವ ಮಾತನ್ನು ಹೇಳಿದ್ದೆ, ಈಗ ಅದು ಸತ್ಯವೂ ಆಗಿದೆ” ಎಂದರು.
“ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರೆಲ್ಲಾ ಮುಸ್ಲಿಂರು. ಈಗಲಾದರೂ ಕೊಲೆ ಮಾಡಿದ್ದು ಮುಸ್ಲಿಂರು ಎನ್ನುವುದನ್ನು ಬಿ.ಕೆ.ಹರಿಪ್ರಸಾದ್ ಒಪ್ಪಿಕೊಳ್ಳುತ್ತಾರೆಯೇ?” ಎಂದು ಈಶ್ವರಪ್ಪ ಪ್ರಶ್ನಿಸಿದರು.




