ಸುಳ್ಯ: ರೋಗಿಯನ್ನು ಪುತ್ತೂರಿಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಕೌಡಿಚಾರ್ ನಲ್ಲಿ ಅಪಘಾತ
ಸುಳ್ಯ: ಗುತ್ತಿಗಾರು ಗ್ರಾಮದಿಂದ ರೋಗಿಯೊಬ್ಬರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅಂಬ್ಯುಲೆನ್ಸ್ ವಾಹನ ಕೌಡಿಚಾರ್ ನಲ್ಲಿ ಅಪಘಾತವಾದ ಘಟನೆ ಇಂದು ಸಂಜೆ ಸುಳ್ಯದಿಂದ ವರದಿ ಯಾಗಿದೆ.
ಗುತ್ತಿಗಾರಿನ ಅಮರ ಚಾರಿಟೇಬಲ್ ಟ್ರಸ್ಟ್ ನ ಆ್ಯಂಬುಲೆನ್ಸ್ ಪುತ್ತೂರಿನ ಕೌಡಿಚಾರು ಬಳಿ ಅಪಘಾತವಾಗಿದ್ದು ಅಂಬ್ಯುಲೆನ್ಸ್ ನವಲ್ಲಿದ್ದವರಿಗೆ ಯಾವುದೇ ಜೀವ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.

ಗುತ್ತಿಗಾರಿನ ಸರಕಾರಿ ಆಸ್ಪತ್ರೆಯಿಂದ ಪುತ್ತೂರಿನ ಆಸ್ಪತ್ರೆಗೆ ರೋಗಿಯಬ್ಬರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ರೋಗಿಯನ್ನು ಬೇರೆ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿಗೆ ಕಳುಹಿಸಲಾಯಿತು. ಘಟನೆಗೆ ಕಾರಣ ಎದುರುನಿಂದ ಬಂದ ವಾಹನವೊಂದಕ್ಕೆ ಸೈಡ್ ಕೊಡುತ್ತಿರುವಾಗ ಆ್ಯಂಬುಲೆನ್ಸ್ ರಸ್ತೆ ಬಿಟ್ಟು ಕೆಳಗಿಳಿದು ಮತ್ತೆ ರಸ್ತೆಗೆ ಎಂಟ್ರಿ ಪಡೆದಾಗ ಹಂಪ್ ಹಾರಿ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಹೋಗಿ ತೋಟಕ್ಕೆ ನುಗ್ಗಿರುವುದಾಗಿ ಆಂಬುಲೆನ್ಸ್ ಚಾಲಕ ಮಾಹಿತಿ ನೀಡಿದ್ದಾರೆ.




