February 2, 2026

ಉಡುಪಿ: ಹಿಜಾಬ್ ಗೆ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿ ತಂದೆಯ ಹೋಟೆಲಿಗೆ ಕಲ್ಲು ತೂರಾಟ

0
image_editor_output_image-473808299-1645501137504

ಉಡುಪಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ‌‌ ನಿನ್ನೆ ತಡರಾತ್ರಿ‌ ಮಲ್ಪೆಯಲ್ಲಿ ನಡೆದಿದೆ.

ಸೈಪ್(20) ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೆ ಒಳಗಾಗಿರುವ ಸೈಫ್ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲ್ಪೆ ಪೇಟೆಯಲ್ಲಿರುವ ಹೈದರ್ ಅಲಿ ಎಂವಬರ ಬಿಸ್ಮಿಲ್ಲಾ ಹೋಟೆಲ್ ‌ಮೇಲೆ‌ ದಾಳಿ‌ ನಡೆದಿದೆ. 70 -100 ಮಂದಿ ದುಷ್ಕರ್ಮಿಗಳ ತಂಡ ಹೊಟೇಲ್ ಗೆ ಕಲ್ಲು ತೂರಾಟ ನಡೆಸಿದ್ದು, ಹೊಟೇಲ್ ಗೆ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಮಲ್ಪೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!