February 3, 2026

ಮಂಗಳೂರು: ಪ್ರಾರ್ಥನಾ ಮಂದಿ ಧ್ವಂಸ ಕೇಸ್‌- ಇಬ್ಬರು ಆರೋಪಿಗಳ ಬಂಧನ

0
image_editor_output_image2085919057-1645500839285

ಮಂಗಳೂರು: ನಗರದ ಕೂಳೂರು ಬಳಿಯ ಪಂಜಿಮೊಗರು ಉರುಂದಾಡಿ ಗುಡ್ಡೆ ಎಂಬಲ್ಲಿನ ಸಂತ ಅಂತೋನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಜ್ಪೆ ನಿವಾಸಿ ಲತೀಶ್(28) ಹಾಗೂ ಪಂಜಿಮೊಗರು, ಉರುಂದಾಡಿ ಗುಡ್ಡೆಯ ಧನಂಜಯ್(36) ಬಂಧಿತ ಆರೋಪಿಗಳು. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸಂತ ಅಂತೋನಿ ಹೋಲಿ ಕ್ರಾಸ್ ಪ್ರಾರ್ಥನಾ ಮಂದಿರವನ್ನು ಫೆ.5ರಂದು ಜೆಸಿಬಿಯಿಂದ ಕೆಡವಿ ಹಾಕಲಾಗಿತ್ತು. ಪರಿಣಾಮ ಆಕ್ರೋಶಗೊಂಡ ಸ್ಥಳೀಯ ಕ್ರೈಸ್ತರು ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕೂಳೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!