February 3, 2026

ಶಿವಮೊಗ್ಗದಲ್ಲಿ ಹರ್ಷ ಮೃತದೇಹದ ಮೆರವಣಿಗೆ ಸಂದರ್ಭ ಕಲ್ಲು ತೂರಾಟ: ಪೊಲೀಸರಿಂದ ಅಶ್ರು ವಾಯು ಪ್ರಯೋಗ

0
IMG_20220221_161601.jpg

ಶಿವಮೊಗ್ಗ: ಹರ್ಷ ಮೃತದೇಹದ ಮೆರವಣಿಗೆ ಸಂದರ್ಭದಲ್ಲಿ, ಈಗ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹರ್ಷ ಮೃತದೇಹದ ಮೆರವಣಿಗೆ ಸಂದರ್ಭದಲ್ಲಿ ಉದ್ರಿಕ್ತ ಗುಂಪಿನಿಂದ ಸಿಕ್ಕ ಸಿಕ್ಕ ಅಂಗಡಿ, ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದೆ.

ಘಟನೆಯಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಇದೀಗ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪೊಲೀಸರು ಅಶ್ರು ವಾಯು ಪ್ರಯೋಗ ಮಾಡಿದ್ದಾರೆ.

ಅಲ್ಲದೇ ತೀವ್ರ ಸ್ವರೂಪಕ್ಕೆ ಪಡೆದಂತ ಪರಿಸ್ಥಿತಿಯನ್ನು ನಿಯಂತ್ರಿಸೋದಕ್ಕೆ ಗಾಳಿಯಲ್ಲಿ ಗುಂಡು ಕೂಡ ಹಾರಿಸಲಾಗಿದೆ.

ಹರ್ಷ ಹತ್ಯೆಯ ಬಳಿಕ ನಿನ್ನೆಯಿಂದ ಶಿವಮೊಗ್ಗದಲ್ಲಿ ಪರಿಸ್ಥಿತಿ ಕೈಮೀರಿದೆ. ಅಲ್ಲಲ್ಲಿ ಕಲ್ಲೆಸೆತ ಘಟನೆಗಳು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!