ಜಮಾಅತ್-ಎ-ಇಸ್ಲಾಮಿ ಸಂಘಟನೆಯ 10ಕ್ಕೂ ಅಧಿಕ ಸದಸ್ಯರ ಮನೆಗಳು ಮೇಲೆ ಎನ್ಐಎ ದಾಳಿ
ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಜಮಾಅತ್-ಎ-ಇಸ್ಲಾಮಿ ಸಂಘಟನೆಯ 10ಕ್ಕೂ ಅಧಿಕ ಸದಸ್ಯರ ಮನೆಗಳು ಹಾಗೂ ಅವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ.
ಬಂಡೊಪೋರಾ, ಬುದ್ಗಾಂ ಹಾಗೂ ಇತರ ಜಿಲ್ಲೆಗಳಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಅವರಿಗೆ ಸ್ಥಳೀಯ ಪೊಲೀಸರು ಸೇರಿದಂತೆ ಸಿಆರ್‌ಪಿಎಫ್ ಸಿಬ್ಬಂದಿಗಳು ನೆರವು ನೀಡಿದ್ದಾರೆ.
ಜಮಾಅತ್-ಎ-ಇಸ್ಲಾಮಿ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ಎರಡು ತಿಂಗಳ ಹಿಂದೆ ಈ ರೀತಿಯಾದ ದಾಳಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ದಾಳಿ ಹಾಗೂ ಶೋಧ ಕಾಯರ್ಯಾಚರಣೆಯ ಬಳಿಕ ಕೆಲವು ಮಂದಿಗೆ ಎನ್‌ಐಎಯ ದೆಹಲಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.