February 3, 2026

ಸಾಲದ ಕಂತು ಕಟ್ಟುವ ವಿಚಾರಕ್ಕೆ ಜಗಳ: ಜೀಪ್ ಹತ್ತಿಸಿ ತಾಯಿಯನ್ನೇ ಕೊಂದ ಮಗ

0
Screenshot_2022-02-19-11-01-37-41_680d03679600f7af0b4c700c6b270fe7.jpg

ಮೈಸೂರು: ಜೀಪ್ ತೆಗೆದುಕೊಳ್ಳಲು ಕೊಡಿಸಿದ ಸಾಲದ ಕಂತು ಕಟ್ಟುವ ವಿಚಾರಕ್ಕೆ ಜಗಳ ನಡೆದು ಮಗನೇ ತಾಯಿಯನ್ನು ಜೀಪ್ ಹತ್ತಿಸಿ ಕೊಂದಿದ್ದಾನೆ. ಆರೋಪಿ ಮಗನನ್ನು ಪೊಲಿಸರು ಬಂಧಿಸಿದ್ದಾರೆ.

ಸಹಕಾರ ಸಂಘದಲ್ಲಿ ಸಾಲ ತೆಗೆದುಕೊಂಡು ಮಗನಿಗೆ ವ್ಯಾನ್‌ ತೆಗೆದುಕೊಟ್ಟ ತಾಯಿಯನ್ನುಮಗ ವ್ಯಾನ್‌ ಹತ್ತಿಸಿ ಕೊಲೆ ಮಾಡಿದ್ದಾನೆ. ಮೈಸೂರು ಜಿಲ್ಲೆ ಬೆಟ್ಟದಪುರ ಹೋಬಳಿಯ ಸೂಳೆಕೋಟೆ ಗ್ರಾಮದ ಹೇಮರಾಜ್‌ ತಾಯಿ ನಾಗಮ್ಮನ ಮೇಲೆ ಜೀಪು ಹರಿಸಿ ಕೊಂದಿದ್ದಾನೆ.

ಹೇಮರಾಜ್‌ ತಾಯಿ ನಾಗಮ್ಮನ ಹೆಸರಿನಲ್ಲಿ ಸಂಘದಿಂದ ಸುಮಾರು 70 ಸಾವಿರ ಸಾಲ ಪಡೆದು ತೂಫಾನ್‌ ವಾಹನವನ್ನು ತೆಗೆದುಕೊಂಡಿದ್ದ, ಸಾಲ ವಾಪಸ್‌ ಕಟ್ಟದಿದ್ದಾಗ ಸಂಘದ ಇತರ ಸದಸ್ಯರು ನಾಗಮ್ಮಳನ್ನು ಒತ್ತಾಯಿಸಿದ್ದರು. ಇದರಿಂದ ನಾಗಮ್ಮ ಮಗ ಹೇಮರಾಜ್‌ನಿಗೆ ಸಾಲ ವಾಪಸ್‌ ಕಟ್ಟುವಂತೆ ಹೇಳಿದಾಗ ವಾಗ್ವಾದ ನಡೆದಿದೆ.

ಆಕೆ ಮರಳಿ ಮನೆಗೆ ಹಿಂದಿರುಗುತ್ತಿದ್ದಾಗ ಜೀಪಿನಲ್ಲಿ ಹಿಂಬಾಲಿಸಿಕೊಂಡು ಬಂದು ತಾಯಿಯ ಮೇಲೆ ವಾಹನ ಚಲಾಯಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಕೂಡಲೇ ನಾಗಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.

ಗ್ರಾಮಸ್ಥರು ಹಾಗೂ ಸಂಬಂಧಿಕರ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!