February 3, 2026

ಕಾವಿನಮೂಲೆ ಪಾಟಾಜೆ ಸಮೀಪ ರಸ್ತೆ ಹಾಗೂ ಕೆರೆ ಸಂಬಂಧಿಸಿ, ಸುಳ್ಯ ತಾಲೂಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

0
IMG-20220218-WA0009.jpg

ಸುಳ್ಯ: ತಾಲೂಕಿನ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಪಾಟಾಜೆ ಎಂಬಲ್ಲಿ ದಲಿತ ನಿವಾಸಿ ವಿಜಯ ಪಾಟಾಜೆ ಎಂಬವರ ಮನೆಗೆ ಹೋಗುವ ರಸ್ತೆಗೆ ಸ್ಥಳೀಯ ನಿವಾಸಿಯೋರ್ವರು ಮಣ್ಣು ಸುರಿದ್ದಿದ್ದು ಅದನ್ನು ತೆರವು ಗೊಳಿಸಲಿಲ್ಲ ಮತ್ತು ಕುಡಿಯಲು ಮತ್ತು ಕೃಷಿಗೆ ಬಳಸುತ್ತಿದ್ದ ನೀರಿನ ಕೆರೆಯನ್ನು ಮುಚ್ಚಿಸಿ ವರ್ಷಗಳೇ ಕಳೆದರೂ ದುರಸ್ತಿಪಡಿಸಿ ಕೊಡಲಿಲ್ಲ ಎಂದು ಆರೋಪಿಸಿ ಇಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸುಂದರ ಪಾಟಾಜೆ ಅಶೋಕ್ ಭಟ್ ಎಂಬುವವರು ತಮ್ಮ ಜಾಗವನ್ನು ಸಮತಟ್ಟು ಮಾಡುವ ಸಂದರ್ಭ ತೆಗೆದ ಮಣ್ಣನ್ನು ವಿಜಯ ಪಾಟಾಜೆ ಎಂಬವರ ದಲಿತ ಕುಟುಂಬದ ಮನೆಗೆ ಹೋಗುವ ರಸ್ತೆಗೆ ಹಾಕಿದ್ದು ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡು ವರ್ಷಗಳೇ ಕಳೆದಿದೆ.ಈ ಘಟನೆಯ ಕುರಿತು ಕಳೆದ ಒಂದು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ, ಪುತ್ತೂರು ಉಪವಿಭಾಗಾಧಿಕಾರಿಗಳ , ಸುಳ್ಯ ತಹಶೀಲ್ದಾರರ ಗಮನಕ್ಕೆ ನೀಡಲಾಗಿದ್ದು ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ.
ಅಧಿಕಾರಿಗಳ ಬಳಿ ಕೇಳಿದಾಗ ಆ ಜಾಗವು ಅವರ ವರ್ಗ ಜಾಗದಲ್ಲಿ ಇದೆ ಎಂದು ಅಶೋಕ್ ಭಟ್ ರವರು ಹೇಳುತ್ತಿದ್ದಾರೆ. ಆದ್ದರಿಂದ ಜಾಗದ ಸರ್ವೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಅಂದು ಭರವಸೆ ನೀಡಿದ್ದರು.

ನಂತರ ಈ ಎಲ್ಲಾ ಬೆಳವಣಿಗೆಗಳ ಕುರಿತು ಅಧಿಕಾರಿಗಳು ಬಂದು ಸ್ಥಳ ಅಳತೆ ಮಾಡಿದಾಗ ರಸ್ತೆ ಬರುವಂತ ಜಾಗ ಸರಕಾರಿ ಜಾಗವಾಗಿದೆ ಎಂದು ತಿಳಿದುಬಂದಿತ್ತು.
ಆದರೂ ಕೂಡ ಇಂದಿನವರೆಗೆ ಮಣ್ಣು ತೆಗೆಸಿ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡದ ಹಿನ್ನೆಲೆಯಲ್ಲಿ ಇಂದು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ನಡೆಸಿ ನಮಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಅದೇ ರೀತಿ ಮತ್ತೊಂದು ಘಟನೆಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳ ಹಿಂದೆ ಪರಿಸರದಲ್ಲಿದ್ದ ಕುಡಿಯುವ ನೀರಿನ ಕೆರೆಯನ್ನು ತಾಲೂಕು ಪಂಚಾಯಿತಿ ನವರು ಮುಚ್ಚಿಸಿ ಆ ಪರಿಸರದ ನಿವಾಸಿ ವಿಜಯ ಪಾಟಾಜೆ ರವರ ಕುಟುಂಬಕ್ಕೆ ಕುಡಿಯುವ ನೀರಿಗೆ ಮತ್ತು ಕೃಷಿಗೆ ಬಳಸುವ ನೀರನ್ನು ಇಲ್ಲದಂತೆ ಮಾಡಿಸಿ ಇಂದಿನವರೆಗೆ ಅದನ್ನು ದುರಸ್ತಿಪಡಿಸಿ ಕೊಡದೆ ನಮ್ಮ ಮೇಲೆ ಅನ್ಯಾಯ ಮಾಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಕುನ್ನಿ ಅಹಮದ್ ತಹಸಿಲ್ದಾರ್ ಇರುವ ಸಂದರ್ಭ ಅವರು ಸ್ಥಳಕ್ಕೆ ಪರಿಶೀಲನೆ ನಡೆಸಿ ಕೆರೆಯ ನಿರ್ಮಾಣ ಮೊದಲಿನಂತೆ ಮಾಡಿಕೊಡಲು ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಮಳೆಗಾಲ ವಿದ್ದು ಮಳೆಗಾಲದ ನಂತರ ಮಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದರು. ಆದರೆ ಇಂದಿನ ವರೆಗೆ ಕಾಮಗಾರಿಯನ್ನು ಮಾಡಿ ಕೊಟ್ಟಿರುವುದಿಲ್ಲ ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಂಡು ಮುಚ್ಚಿಸಿರುವ ಕೆರೆಯನ್ನು ಮೊದಲಿನಂತೆ ಸರಿಪಡಿಸಿ ಕೊಡಲು ನಾವು ಆಗ್ರಹಿಸುತಿದ್ದೇವೆ ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಇದೀಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಸಂಚಾಲಕ ಪರಮೇಶ್ವರ ಕೆಮ್ಮಿಂಜೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!