February 3, 2026

ನಟ ಕಲಾತಪಸ್ವಿ ರಾಜೇಶ್ ನಿಧನ

0
images-32.jpeg

ಬೆಂಗಳೂರು: ನಟ ಕಲಾತಪಸ್ವಿ ರಾಜೇಶ್ (87) ವರ್ಷ. ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಾಜೇಶ್ ಅವರಿಗೆ 1968ರ ನಮ್ಮ ಊರು ಚಿತ್ರ ಹೆಸರು ತಂದುಕೊಟ್ಟಿತ್ತು. ನಂತರ ರಾಜೇಶ್ ಎಂದು ಹೆಸರು ಬದಲಿಸಿಕೊಂಡಿದ್ದರು.

ಡಾ. ರಾಜೇಶ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು.

ಬೆಂಗಳೂರಿನ ಬಾಣಸವಾಡಿಯ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ರಾಜೇಶ್ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಅವರಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇವರ ಅಗಲಿಕೆಯಿಂದ ಚಿತ್ರರಂಗ ಕಳೆದುಕೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!