ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮೊದಲು ಸರಕಾರ ಹೊಸ ಮಾರ್ಗಸೂಚಿ ಓದಿ
ನವದೆಹಲಿ: ಮೋಟಾರು ಬೈಕಿನಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತು ಕರಡು ನಿಯಮಗಳನ್ನು ಸಿದ್ದಪಡಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರಲ್ಲಿ ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಹೊಸ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.
4 ವರ್ಷದೊಳಗಿನ ಮಕ್ಕಳನ್ನು ಮೋಟಾರ್ ಸೈಕಲ್ ನ ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗುವಾಗ ವೇಗವು ಗಂಟೆಗೆ 40 ಕಿ.ಮೀಗಿಂತ ಹೆಚ್ಚಿರಬಾರದು. ಅಲ್ಲದೇ 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ ಕ್ರ್ಯಾಶ್ ಹೆಲ್ಮೆಟ್ ಧರಿಸಬೇಕು ಎಂದಿದೆ.
ಸುರಕ್ಷತಾ ಚೀಲ ಹಗುಲವಾಗಿದ್ದು ವಾಟರ್ ಪ್ರೂಪ್, ಬಾಳಿಕೆ ಬರುವಂಥದ್ದಾಗಿರಬೇಕು. ಸುಲಭವಾಗಿ ಅಡ್ಜೆಸ್ಟ್ ಮಾಡುವಂತಿರಬೇಕು ಅಧಿಕಾ ಸಾಂದ್ರತೆಯುಳ್ಳ ಪೋಮ್ನೊಂದಿಗೆ ನೈಲಾನ್ ಅಥವಾ ಮಲ್ಟಿಫಿಲಮೆಂಟ್ ನೈಲಾನಿಂದ ನಿರ್ಮಿಸಿರಬೇಕು, ೩೦ ಕೆ.ಜಿ ಯಷ್ಟು ತೂಕವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನೂ ಅದು ಹೊಂದಿರಬೇಕು ಎಂದು ಹೇಳಿದೆ.
4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್ ಅಥವಾ ಸ್ಕೂಟರ್ ರೈಡ್ ಹೋಗುವಾಗ ಮಕ್ಕಳು ಹೆಲ್ಮೆಟ್ ಖಡ್ಡಾಯವಾಗಿ ಧರಿಸಬೇಕು. ಈ ಹೆಲ್ಮೆಟ್ ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು. 9 ರಿಂದ 4 ವರ್ಷದೊಳಗಿನ ಮಕ್ಕಳ ಸೈಕಲ್ ಹೆಲ್ಮೆಟ್ ರೀತಿಯ ಸ್ಟಾಂಡರ್ಡ್ ಹೆಲ್ಮೆಟನ್ನು ಮಕ್ಕಳಿಗೂ ಹಾಕಬೇಕು.