December 16, 2025

ನಿಂದನೆಗೆ ಗುರಿಯಾಗಿರುವ ಮೊಹಮ್ಮದ್‌ ಶಮಿಯ ಬೆಂಬಲಕ್ಕೆ ನಿಂತ ಬಿಸಿಸಿಐ

0
image_editor_output_image1189896768-1635313071850.jpg

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಬಲ ವ್ಯಕ್ತಪಡಿಸಿದೆ.

ಟಿ–20 ವಿಶ್ವಕಪ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಅಭಿಮಾನಿಗಳು ಆನ್‌ಲೈನ್ ದಾಳಿ ನಡೆಸಿದ್ದರು. ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ನಿಂದಿಸಲಾಗಿತ್ತು.

ಸದ್ಯ ಮೊಹಮ್ಮದ್‌ ಶಮಿ ಬೆಂಬಲಕ್ಕೆ ನಿಂತಿರುವ ಬಿಸಿಸಿಐ, ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಶಮಿ ಫೋಟೊವನ್ನು ಹಂಚಿಕೊಂಡಿದ್ದು, ‘ನೀವು ತಂಡದ ಹೆಮ್ಮೆ ಮತ್ತು ಬಲ’ ಎಂದು ಬರೆದುಕೊಂಡಿದೆ.

ಶಮಿ ವಿರುದ್ಧದ ನಿಂದನೆಯನ್ನು ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಇರ್ಫಾನ್‌ ಪಠಾಣ್, ಯೂಸುಫ್ ಪಠಾಣ್, ಯಜುವೇಂದ್ರ ಚಾಹಲ್‌ ಸೇರಿದಂತೆ ಅನೇಕರು ಖಂಡಿಸಿದ್ದರು.

ಸೂಪರ್ 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಇದು ವಿಶ್ವಕಪ್‌ ಒಂದರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಜಯವಾಗಿತ್ತು. 29 ವರ್ಷಗಳಲ್ಲಿ 12 ಬಾರಿ ಮುಖಾಮುಖಿಯಾದಾಗಲೂ ಗೆಲುವು ಭಾರತದ್ದಾಗಿತ್ತು.

Leave a Reply

Your email address will not be published. Required fields are marked *

error: Content is protected !!