ನಾನು ಭಯೋತ್ಪಾದಕ ಅಲ್ಲ ಎಂದ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ
ಚಂಡೀಗಢ: ‘ನಾನು ಮುಖ್ಯಮಂತ್ರಿ, ನಾನು ಭಯೋತ್ಪಾದಕ ಅಲ್ಲ ಎಂದು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಜಿತ್ ಸಿಂಗ್ ಚನ್ನಿ ಅವರ ಹೆಲಿಕಾಪ್ಟರ್ ಸೋಮವಾರ ಎರಡು ಬಾರಿ ಟೇಕ್ ಆಫ್ ಮಾಡುವುದರಿಂದ ತಡೆಯಲಾಗಿದ್ದು, ಹೆಲಿಕಾಪ್ಟರ್ ಹಾರಲು ಬಿಡದಿದ್ದಕ್ಕೆ ಎರಡು ಬಾರಿ ಕೋಪಗೊಂಡ ಸಿಎಂ, ‘ನಾನು ಮುಖ್ಯಮಂತ್ರಿ, ನಾನು ಭಯೋತ್ಪಾದಕ ಅಲ್ಲ. ಇವು ವಿಚಿತ್ರ ಕೃತ್ಯಗಳು. ರಾಹುಲ್ ಗಾಂಧಿಯವರ ರ‍್ಯಾಲಿಯಲ್ಲಿ ಭಾಗವಹಿಸದಂತೆ ನನ್ನನ್ನು ವಿಮಾನಯಾನ ವಲಯದ ನೆಪದಲ್ಲಿ ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಚನ್ನಿ, ‘ನನಗೆ ಈಗಾಗಲೇ ವಿಮಾನಯಾನಕ್ಕೆ ಅನುಮತಿ ನೀಡಲಾಗಿತ್ತು, ಹೀಗಿದ್ದರೂ ಚಂಡೀಗಢದಿಂದ ಹೋಶಿಯಾರ್‌ಪುರಕ್ಕೆ ಬರುವುದನ್ನು ತಡೆಯಲಾಯಿತು. ಬಹಳ ಹೊತ್ತಿನ ನಂತರ ಅನುಮತಿ ಸಿಕ್ಕ ಬಳಿಕ ಸುಜನಪುರ ತಲುಪಿದೆ ಎಂದು ಹೇಳಿದ್ದಾರೆ.




